ವಿಶ್ವಹಿಂದು ಪರಿಷದ್ ಬಜರಂಗದಳ ಕಾರ್ಕಳ ಇದರ ವತಿಯಿಂದ ಕಾಶ್ಮೀರದ ಪೆಹಾಲ್ಗವ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮಡಿದವರಿಗೆ ಶೋಕಾಚಾರಣೆ ಮತ್ತು ಅಮಾಯಕ ಹಿಂದುಗಳ ಮೇಲೆ ನಡೆದ ದಾಳಿಯ ವಿರುದ್ದ ಕಾರ್ಕಳ ಬಸ್ ಸ್ಟ್ಯಾಂಡಿನಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಯನ್ನು ಉದ್ದೇಶಿಸಿ ವಿಶ್ವ ಹಿಂದು ಪರಿಷತ್ತಿನ ಕರ್ನಾಟಕ ರಾಜ್ಯ ಗೋರಕ್ಷಾ ಪ್ರಮುಖರಾದ ಸುನಿಲ್ ಕೆ. ಆರ್. ಮಾತನಾಡಿ ಹಿಂದೂಗಳ ಮೇಲೆ ಈ ದೇಶದಲ್ಲಿ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ ನಿರಂತರವಾಗಿ ನಡೆಯುತ್ತಿದ್ದು ಅದರ ಮುಂದುವರಿದ ಭಾಗವಾಗಿ ಕಾಶ್ಮೀರ ದಲ್ಲಿ ಧರ್ಮದಾರಿತ ಹತ್ಯೆ ಆಗಿರುವಂತಹುದು ಅತ್ಯಂತ ಹೇಯ ಘಟನೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಕೇಂದ್ರ ಸರಕಾರ ಭಯೋತ್ಪಾದನೆಯನ್ನು ಸರ್ವನಾಶ ಮಾಡಬೇಕೆಂದು ಅಗ್ರಹಿಸಿದರು. ಈ ಸಂದರ್ಭದಲ್ಲಿ ವಿಶ್ವಹಿಂದು ಪರಿಷತ್ತು ಮತ್ತು ಸಂಘ ಪರಿವಾರದ ಪ್ರಮುಖರು ಉಪಸ್ಥಿತರಿದ್ದರು. ಬಜರಂಗದಳ ಜಿಲ್ಲಾ ಸಂಯೋಜಕರು ಚೇತನ್ ಪೇರಲ್ಕೆ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.