ಮೇ25: ಕಾಸರಗೋಡು ಜಿಲ್ಲಾ ಕುಲಾಲ ಸಂಘ (ರಿ) ಮಂಜೇಶ್ವರ ಮಿನಿ ಸಭಾಂಗಣದ ಉದ್ಘಾಟನೆ ಜಿಲ್ಲಾ ಮಟ್ಟದಲ್ಲಿ ಪುಸ್ತಕ ವಿತರಣೆ – ಪ್ರತಿಭಾ ಪುರಸ್ಕಾರ ಸಾಧಕರಿಗೆ ಗೌರವಾರ್ಪಣೆ – 41ನೇ ವಾರ್ಷಿಕೋತ್ಸವ – ಮಹಾಸಭೆ

0
158

ಕಾಸರಗೋಡು ಜಿಲ್ಲಾ ಕುಲಾಲ ಸಂಘ (ರಿ) ಮಂಜೇಶ್ವರ ಕಾಸರಗೋಡು ಇದರ ಜಿಲ್ಲಾ ಕುಲಾಲ ಸಮುದಾಯ ಭವನದ ನೆಲಅಂತಸ್ತಿನಲ್ಲಿ ನಿರ್ಮಾಣಗೊಂಡಿರುವ ಮಿನಿ ಸಭಾಂಗಣದ ಉದ್ಘಾಟನೆ ಜಿಲ್ಲಾ ಮಟ್ಟದಲ್ಲಿ ಪುಸ್ತಕ ವಿತರಣೆ – ಪ್ರತಿಭಾ ಪುರಸ್ಕಾರ ಸಾಧಕರಿಗೆ ಗೌರವಾರ್ಪಣೆ – 41ನೇ ವಾರ್ಷಿಕೋತ್ಸವ – ಮಹಾಸಭೆಯು 25-05-2025ನೇ ರವಿವಾರ ಬೆಳಿಗ್ಗೆ ಗಂಟೆ 8.00ರಿಂದ ಜಿಲ್ಲಾ ಕುಲಾಲ ಸಮುದಾಯ ಭವನ, ತೂಮಿನಾಡು, ಕುಂಜತ್ತೂರಿನಲ್ಲಿ ನಡೆಯಲಿದೆ.

ಕಾರ್ಯಕ್ರಮಗಳು

ಬೆಳಗ್ಗೆ 8.00ರಿಂದ ಗಣಹೋಮ ಬೆಳಿಗ್ಗೆ 8.00ಕ್ಕೆ : ಭಜನೆ – ಅಡ್ಕ ಬಂಗೇರ ಮೂಲಸ್ಥಾನ ಭಜನಾ ಮಂಡಳಿ ಸದಸ್ಯರಿಂದ, 8.45: ಭಜನೆ – ಬಾಲಾಂಜನೇಯ ವ್ಯಾಯಾಮ ಶಾಲೆಯ ಭಜನಾ ತಂಡದಿಂದ យំម 9.30 : ಭಜನೆ – ಶ್ರೀ ಮಹಾಕಾಳಿ ಭಜನಾ ಮಂಡಳಿ, ತುಮಿನಾಡು ತಂಡದಿಂದ, 10.15 : ಕುಣಿತ ಭಜನೆ – ನಂದಗೋಕುಲ ಭಜನಾ ತಂಡ, ತೂಮಿನಾಡು ಬೆಳಗ್ಗೆ 10.30ರಿಂದ ಸಭಾಕಾರ್ಯಕ್ರಮ ಆರಂಭ.

ಮಧ್ಯಾಹ್ನ ಗಂಟೆ 1.30ರಿಂದ ಸಹಭೋಜನ ಮಧ್ಯಾಹ್ನ ಗಂಟೆ 2.00ರಿಂದ : 41ನೇ ವಾರ್ಷಿಕ ಮಹಾಸಭೆ ನಡೆಯಲಿದೆ.

ರವೀಂದ್ರ ಮುನ್ನಿಪ್ಪಾಡಿ, ನ್ಯಾಯವಾದಿ, ಮಂಗಳೂರು ಅಧ್ಯಕ್ಷರು, ಕಾಸರಗೋಡು ಜಿಲ್ಲಾ ಕುಲಾಲ ಸಂಘ (ರಿ) ಮಂಜೇಶ್ವರ ಸ್ವಾಗತ ಮತ್ತು ಪ್ರಸ್ತಾವನೆ ಮಾಡಲಿರುವರು. ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಧಾಮ ಮಾಣಿಲ ಆಶೀರ್ವಚನ ನೀಡಲಿರುವರು. ಶಶಿಧರ್ ಕೌಡಿಚಾರು, ರೋನಲ್ ಹೆಡ್ (ಜನರಲ್ ಮ್ಯಾನೇಜರ್), ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಚೆನ್ನೈ ಅಧ್ಯಕ್ಷತೆ ವಹಿಸಲಿರುವರು. ಪ್ರೇಮಾನಂದ ಕುಲಾಲ್ ಕೋಡಿಕಲ್ ಅಧ್ಯಕ್ಷರು, ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ (ರಿ) ಕುಲಶೇಖರ, ಮಂಗಳೂರು ಉದ್ಘಾಟಿಸಲಿರು. ಮುಖ್ಯ ಅತಿಥಿಗಳಾಗಿ ವಿಠಲ ಕುಲಾಲ್, ದಿವಾಕರ ಮೂಲ್ಯ, ಗಣೇಶ್ ಕುಲಾಲ್, ಅನಿಲ್‌ದಾಸ್, ಸಾವಿತ್ರಿ ಮಹಾಬಲ ಹಾಂಡ, ಕಮಲಾಕ್ಷಿ ವಿ. ಕುಲಾಲ್, ವರ್ಕಾಡಿ ಡಿವಿಜನ್ ಜಯಂತಿ ಬದಿಯಡ್ಕ ರಾಮಚಂದ್ರ ಬಡಾಜೆ, ಚಂದ್ರಶೇಖರ್ ಸಾಲ್ಯಾನ್, ಉಮೇಶ್ ಇಡಿಯಾಲ, ಮಾಲತಿ ಪಿ., ರಾಮ ಅಂಗಡಿಮಾರ್, ಜಯಪ್ರಕಾಶ್ ಕೈರಂಗಳ ಉಪಸ್ಥಿತರಿರಲಿರುವರು. ದಾಮೋದರ ಮಾಸ್ಟರ್ ಕಬ್ಬಿನಹಿತ್ತಿಲು ಧನ್ಯವಾದ ಸಲ್ಲಿಸಲಿರುವರು.

LEAVE A REPLY

Please enter your comment!
Please enter your name here