ಮೂಡುಬಿದಿರೆ: ಆಮ್ನಾಯ-ಯಕ್ಷ ಸಂಸ್ಕೃತಿ ಬಳಗ, ಗಾಳಿಮನೆಯ ದ್ವಿತೀಯ ವಾರ್ಷಿಕೋತ್ಸವ ಜೂನ್ 28 ರಂದು ಮೂಡುಬಿದಿರೆ ಜೈನ ಮಠದ ಭಟ್ಟಾರಕ ಭವನದಲ್ಲಿ ನಡೆಯಿತು. ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ಕಲಾವಿದರು ಎಲ್ಲಾ ಪಾತ್ರಗಳನ್ನೂ ಭಕ್ತಿ, ಶ್ರದ್ಧೆ,, ಜೀವಂತಿಕೆ ಯಿಂದ ಜನರೆದುರು ಪ್ರದರ್ಶನಗೊಳಿಸಲಿ ಎಂದು ಶುಭ ಹಾರೈಸಿದರು.
ಪ್ರಧಾನ ಅಭ್ಯಾಗತ ಉಜಿರೆ ಅಶೋಕ ಭಟ್ ಮಾತನಾಡಿ ರಂಗಭೂಮಿಯ ತಾಳಮದ್ದಳೆ ಉತ್ತಮ ಚೌಕಟ್ಟಿನಲ್ಲಿ ಭಾವ ಪುಷ್ಠಿಯಿಂದ ಸದಾರುಚಿ ಮೂಡಿಸಲು ಆಶಿಸಿದರು. ಬಳಗವು ಕಠಿಣ ಹಾದಿಯಲ್ಲಿ ಸುಲಲಿತವಾಗಿ ನಡೆಯುವ ಪ್ರಯತ್ನದಲ್ಲಿ ಯಶಸ್ಸು ಕಾಣಲಿ ಎಂದು ಹಾರೈಸಿದರು. ಭಾರತೀಯ ಸಂಸ್ಕೃತಿ ಉಳಿಸುವ ಕಾರ್ಯಕ್ಕೆ ಅಲಂಗಾರು ದಯಾನಂದ ಪೈ ಬೆಂಬಲ ಸೂಚಿಸಿದರು. ಸದಾಭಿರುಚಿಯ ಯಕ್ಷ ಸಂಸ್ಕೃತಿ ಹರಡಲಿ ಎಂದು ಡಾ. ಪ್ರಸನ್ನ ಕಾಕುಂಜೆ ಶುಭ ನುಡಿದರು. ಗುರುವಿನ ಅನುಗ್ರಹ ಸದಾ ಇರಲಿ ಎಂದು ರಾಘವೇಂದ್ರ ಭಂಡಾರ್ಕರ್ ಹಾರೈಸಿದರು. ವೇದಿಕೆಯಲ್ಲಿ ಧರ್ಮಸ್ಥಳ ಬಿ. ಭುಜಬಲಿ, ಎಂ ಸಿ ಎಸ್ ನ ಎಂ. ಬಾಹುಬಲಿ ಪ್ರಸಾದ್, ಉಪಸ್ಥಿತರಿದ್ದರು.
ಉದ್ಯಮಿ ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿ ಸಂಸ್ಥೆಗೆ ಶುಭ ಹಾರೈಸಿದರು. ಡಾ.ವಿನಾಯಕ ಚ. ಭಟ್ಟ ಗಾಳಿಮನೆ ಸ್ವಾಗತಿಸಿ, ವಂದಿಸಿದರು. ಶಿವಪ್ರಸಾದ್ ಭಟ್ ಕಾಂತಾವರ ಕಾರ್ಯಕ್ರಮ ನಿರೂಪಿಸಿದರು.
ವರದಿ ರಾಯಿ ರಾಜಕುಮಾರ ಮೂಡುಬಿದಿರೆ