ನಚಿಕೇತ ವಿದ್ಯಾಲಯ ಬೈಲೂರು : ವರ್ಧನ – 2025 ಗಣಿತ ತರಬೇತಿ ಕಾರ್ಯಾಗಾರ ಉದ್ಘಾಟನೆ

0
218

ಕಾರ್ಕಳ: ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ ಗಣಿತ ತರಬೇತಿ ಕಾರ್ಯಾಗಾರ ವರ್ಧನ-25 ನಚಿಕೇತ ವಿದ್ಯಾಲಯ ಬೈಲೂರು ಆಶ್ರಯದಲ್ಲಿ ಜರುಗಿತು. ವಿದ್ಯಾಭಾರತಿ ಕರ್ನಾಟಕ ತರಬೇತಿ ಕಾರ್ಯಾಗಾರವನ್ನು ಒಂದು ಬೆಳವಣಿಗೆಯ ಪಥವೆಂದು ನಂಬಿದ್ದು, ಅದು ಶಿಕ್ಷಕರ ಬೆಳವಣಿಗೆಯ ಪಥವಾಗಿದೆ. ಶಿಕ್ಷಕರು ಪ್ರಸ್ತುತ ವಿದ್ಯಮಾನಗಳಿಗೆ ತಮ್ಮನ್ನು ತೆರೆದುಕೊಳ್ಳಬೇಕಾಗಿದೆ. ಶಿಕ್ಷಕ ನಿಂತ ನೀರಾಗಿರದೆ ಸದಾ ಹರಿಯುವ ನದಿ ಸಮಾನವಾಗಿರಬೇಕು. ನಚಿಕೇತ ವಿದ್ಯಾಲಯ ಬೈಲೂರು ಶಾಲೆಯಲ್ಲಿ ನಡೆದ ವರ್ಧನ – 2025 ಕಾರ್ಯಾಗಾರವನ್ನು ಉದ್ದೇಶಿಸಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷರು ಪಾಂಡುರಂಗ ಪೈ ಉದ್ಘಾಟಿಸಿ ಮಾತನಾಡಿದರು.

ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿರುವ ಸೇವಾಸಂಗಮ ವಿದ್ಯಾಕೇಂದ್ರದ ಮುಖ್ಯೋಪಾಧ್ಯಾಯ ಹರ್ಷ ಕೋಟೇಶ್ವರ ಗಣಿತ ತರಬೇತಿಯನ್ನು ನೀಡಿದರು. ಸಂಜೆಯ ಸಮಾರೋಪ ಸಮಾರಂಭದಲ್ಲಿ ಕಲಿಕೆ ನಿರಂತರವಾಗಿದೆ. ನಾವು ಕಲಿತದು ಆಗಾಧವೆಂಬ ಭ್ರಮೆ ಬೇಡ, ಅರಿವು ಜೀವನಪರ್ಯಂತ ಇರುವುದು. ಈ ದಿನದ ಕಾರ್ಯಾಗಾರ ನಿಮ್ಗೆಲ್ಲರಿಗೂ ಪ್ರಯೋಜನವಾಗಿದೆ ಎಂಬ ಭಾವನೆ ನನ್ನದು. ತರಗತಿಯ ಪಾಠದಲ್ಲಿ ಇದರ ಬಳಕೆಯಾಗಲಿ ಎಂದು ಆಡಳಿತ ಮಂಡಳಿಯ ಅಧ್ಯಕ್ಷರುಮಚ್ಚೇಂದ್ರನಾಥ ಎಮ್ . ಮಾತನಾಡಿದರು.


ಸಂಪನ್ಮೂಲ ವ್ಯಕ್ತಿ ಹರ್ಷ ಕೋಟೇಶ್ವರ ಅವರಿಗೆ ಸನ್ಮಾನಿಸಲಾಯಿತು. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಶೈಕ್ಷಣಿಕ ಸಂಯೋಜಿತ 23 ಗಣಿತ ಶಿಕ್ಷಕರು ಭಾಗವಹಿಸಿದರು. ಚಂದ್ರಿಕಾ ದಿವಾಕರ್ ಮಾತಾಜಿ ಕಾರ್ಯಕ್ರಮವನ್ನು ನಿರೂಪಿಸಿದರು. ಮಹೇಶ್ ಹೈಕಾಡಿ, ಕಾರ್ಯದರ್ಶಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಪ್ರಾಸ್ತಾವಿಕ ನುಡಿಯನ್ನಾಡಿದರು. ನಚಿಕೇತ ಮಾತೃಭಾರತಿಯ ಅಧ್ಯಕ್ಷೆ ದಿಕ್ಷಿತಾ ರಾವ್ , ಕಾರ್ಯದರ್ಶಿ ಸ್ನೇಹಲತಾ ಮತ್ತು ಸಂಸ್ಥೆಯ ಗುರೂಜಿ ಮಾತಾಜಿಯವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here