JCI ಪರ್ಕಳದ ಶಾಶ್ವತ ಯೋಜನೆ–2026ಗೆ ಮತ್ತೊಂದು ಹೆಮ್ಮೆಯ ಸಾಧನೆ
ಉಡುಪಿ, ಜುಲೈ 12: ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುವ JCI ಪರ್ಕಳ, ತನ್ನ ಶಾಶ್ವತ ಯೋಜನೆ–2026*ರ ಅಂಗವಾಗಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸುಮಾರು *₹1.25 ಲಕ್ಷ ಮೌಲ್ಯದ ಅತ್ಯಾಧುನಿಕ Electrolyte Analyser ಯಂತ್ರವನ್ನು ಕೊಡುಗೆಯಾಗಿ ನೀಡುವ ಮೂಲಕ ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿತು.

JCI ಭಾರತದ ರಾಷ್ಟ್ರೀಯ ಅಧ್ಯಕ್ಷರಾದ RPP Bharath N Acharya ಅವರ ಅಧಿಕೃತ ಭೇಟಿಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಈ ಯಂತ್ರವನ್ನು ಜಿಲ್ಲಾ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು. ಬಳಿಕ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಯು.ಟಿ. ಖಾದರ್ ಅವರು JCI ಪರ್ಕಳದ ಅಧ್ಯಕ್ಷರಾದ JFM Bharath K Kulal ಅವರ ನೇತೃತ್ವದಲ್ಲಿ ಯಂತ್ರವನ್ನು ಲೋಕಾರ್ಪಣೆ ಮಾಡಿದರು.
ಈ ಅತ್ಯಾಧುನಿಕ Electrolyte Analyser ಯಂತ್ರದ ಮೂಲಕ ರಕ್ತದಲ್ಲಿನ ಪ್ರಮುಖ ಎಲೆಕ್ಟ್ರೋಲೈಟ್‌ಗಳಾದ ಸೋಡಿಯಂ, ಪೊಟ್ಯಾಸಿಯಂ ಹಾಗೂ ಕ್ಲೋರೈಡ್ ಮಟ್ಟವನ್ನು ಕ್ಷಿಪ್ರವಾಗಿ ಮತ್ತು ನಿಖರವಾಗಿ ಪರೀಕ್ಷಿಸಲು ಸಾಧ್ಯವಾಗಲಿದ್ದು, ತುರ್ತು ಚಿಕಿತ್ಸೆಯಲ್ಲಿರುವ ಹಾಗೂ ಗಂಭೀರ ಸ್ಥಿತಿಯ ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸಲು ಇದು ನೆರವಾಗಲಿದೆ.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿ ಶ್ರೀಮತಿ ಸ್ವರೂಪಾ ಟಿ.ಕೆ., ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಎಚ್. ಅಶೋಕ, JCI ಪರ್ಕಳದ ಪೂರ್ವಾಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದು, JCI ಪರ್ಕಳದ ಈ ಸಮಾಜಮುಖಿ ಶಾಶ್ವತ ಯೋಜನೆಯನ್ನು ಶ್ಲಾಘಿಸಿದರು.
JCI ಪರ್ಕಳವು ಸಮಾಜದ ಅಗತ್ಯಗಳನ್ನು ಗುರುತಿಸಿ ಶಾಶ್ವತ ಪರಿಣಾಮ ಬೀರುವ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಸಾರ್ವಜನಿಕ ಆರೋಗ್ಯ ಸೇವೆಯ ಅಭಿವೃದ್ಧಿಗೆ ನೀಡಿರುವ ಈ ಕೊಡುಗೆ ಸಂಸ್ಥೆಯ ಸೇವಾ ಬದ್ಧತೆಯ ಮತ್ತೊಂದು ಹೆಮ್ಮೆಯ ಮೈಲುಗಲ್ಲಾಗಿದೆ.

