ಶೀಘ್ರ ಕ್ರಮ ಕೈಗೊಳ್ಳುವಂತೆ ಹಿಂದೂ ಜಾಗರಣಾ ವೇದಿಕೆಯಿಂದ ಆಗ್ರಹ
ಬಂಟ್ವಾಳ :ಹಿಂದೂ ಸಂಘಟನೆಗಳಲ್ಲಿ ತೊಡಗಿಸಿಕೊಂಡ ಪ್ರಮುಖ ನಾಯಕರಿಗೆ ವಿದೇಶದಿಂದ ಮುಜಾಹಿದ್ದಿನ್ ಎಂಬ ಭಯೋತ್ಪಾದಕ ಉಗ್ರ ಸಂಘಟನೆಯ ಹೆಸರಿನಲ್ಲಿ ರಕ್ಷಿತ್ ಕೆ ಬುಡೋಳಿ ಬಿನ್. ಮೋಹನ್ ಮೂಲ್ಯ ಎಂಬವರ ವಾಟ್ಸಪ್ ನಂಬರಿಗೆ ಆಡಿಯೋ ಸಂದೇಶ ಮೂಲಕ ಉರ್ದುವಿನಲ್ಲಿ ಜೀವ ಬೆದರಿಕೆ ಸಂದೇಶವನ್ನು ಹಾಗೂ ಮಂಗಳೂರು ಜಿಲ್ಲಾ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕರಾದ ನರಸಿಂಹ ಮಾಣಿಯವರಿಗೆ ಜೀವ ಬೆದರಿಕೆ ಬಂದಿರುತ್ತದೆ.
ಮಡಂತ್ಯಾರು ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದಲ್ಲಿ ವೃತ್ತಿ ನಿರ್ವಹಿಸುತ್ತಿರುವ ರಕ್ಷಿತ್ ಅವರಿಗೆ ಕಛೇರಿಯಲ್ಲಿ ಇರುವಾಗ ವಾಟ್ಸಾಪ್ ಮೊಬೈಲ್ ನಂಬರಿಗೆ ಸಮಯ ಮದ್ಯಾಹ್ನ 12:36 ಮತ್ತು ಸಂಜೆ 5:10 ಹಾಗೂ ಸಂಜೆ 5:26 ಹೊತ್ತಿಗೆ ವಿದೇಶದಿಂದ ಮುಜಾಹಿದ್ದಿನ್ ಎಂಬ ಭಯೋತ್ಪದಕ ಸಂಘಟನೆಯ ಹೆಸರಿನಿಂದ ಯು ಎ ಯಿ ದೇಶದ ವಾಟ್ಸಪ್ ಮೊಬೈಲ್ ನಂಬರ್ ಹಾಗೂ ಪಾಕಿಸ್ತಾನ ಮತ್ತು ಅಫ್ಘಾನಿಸ್ಥಾನ ದೇಶದ ವಾಟ್ಸಪ್ ಮೊಬೈಲ್ ನಂಬರಿನಿಂದ ಜೀವ ಬೇದರಿಕೆ ಸಂದೇಶಗಳು ಬಂದಿರುತ್ತದೆ.
ಸಂದೇಶದಲ್ಲಿ ‘ಮುಜಾಹಿದ್ದಿನ್‌ಗಳ ಗುರಿ ಎಂದು ತಪ್ಪುದಿಲ್ಲ’ ಎಂದು ನಮೂದಿಸಿ ಮುಂದುವರೆದಂತೆ ‘ಈ ಮುಸ್ಲಿಮ್ ಸಹೋದರನ ಕೊಲೆಯಲ್ಲಿ ಭಾಗಿಯಾಗಿರುವ ರಾಕೇಶ್ ಬುಡೋಳಿ. ಸಹಚರ ನರಸಿಂಹ ಮಾಣಿ ಹಾಗೂ ಇತರ ಎಲ್ಲ ಹೆಸರುಗಳು ನಮ್ಮ ಪಟ್ಟಿಗೆ ಸೇರಿಸಲಾಗಿದೆ. ನಾವು ದೂರವಿಲ್ಲ ನಾವು ನಿಮ್ಮ ಮನೆ ತಲುಪಿದ್ದೇವೆ. ಈಗ ನರಸಿಂಹನ ಕ್ಷಣಗಣನೆ ಆರಂಭವಾಗಿದೆ. ಸತ್ತ ಸುಹಾಶ್ ಶೆಟ್ಟಿ ಅವನಂತೆ ನಿಮ್ಮಿಬ್ಬರನ್ನು ನಾವು ಕೊಲ್ಲುತ್ತೇವೆ. ಜೈಶ್-ಎ-ಮೊಹಮ್ಮದ್‌ನ ಮುಜಾಹಿದ್ದೀನ್ ನವದೆಹಲಿಯನ್ನು ತಲುಪಿದ್ದೇವೆ. ನಾವು ಹೊಸದಿಲ್ಲಿಯಲ್ಲಿದ್ದೇವೆ ಎಂದು ಹೇಳಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯನ್ನು ಒಡ್ಡಿರುತ್ತಾರೆ.
ಅಡಿಯೋ ಮುಖೇನ ಬೆದರಿಸಿದ ಧ್ವನಿಯನ್ನು ಪೆನ್ ಡ್ರೈವ್‌ನಲ್ಲಿ ಸಂಗ್ರಹಿಸಿ ಬಂಟ್ವಾಳ ಗ್ರಾಮಾಂತರ ಠಾಣೆ ನೀಡಲಾಗಿದೆ.
ಪಾಕಿಸ್ತಾನ, ಅಫ್ಘಾನಿಸ್ತಾನ ದೇಶಗಳ ಮೊಬೈಲ್ ನಂಬರ್ ಮೂಲಕ ಭಯತ್ಪಾದಕ ಗುಂಪಿನ ಮುಜಾಹಿದ್ದೀನ್ ಸಂಘಟನೆಯ ಹೆಸರಿನಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿರುವ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹಿಂದೂ ಜಾಗರಣ ವೇದಿಕೆ ಮಂಗಳೂರ್ ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ಡರೆಗುಡ್ಡೆ ಒತ್ತಾಯಿಸಿದ್ದಾರೆ.