
ವಿರಾಜಪೇಟೆ : ನಾಪೋಕ್ಲು ನಾಲ್ಕು ನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘ (ರಿ) ವಾಹನ ಚಾಲಕರ ಸಂಘ ನಾಪೋಕ್ಲು 34ನೇ ವರ್ಷದ ಅದ್ದೂರಿ ಆಯುಧಪೂಜೆ ಕಾರ್ಯಕ್ರಮದಲ್ಲಿ ಮಾನ್ಯ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿ ಶುಭ ಕೋರಿದರು.
ಆಯುಧ ಪೂಜೆ ಆಯೋಜಕರ ಆಮಂತ್ರಣ ಮೇರೆಗೆ ಪೂಜೆ ವಿಧಾನದಲ್ಲಿ ಭಾಗವಹಿಸಿದ ಮಾನ್ಯ ಶಾಸಕರು, ವಾಹನ ಚಾಲಕರ ಕೋರಿಕೆಯಂತೆ ಆಯುಧ ಪೂಜೆ ಬಳಿಕ, ವಾಹನವನ್ನು ಚಲಾಯಿಸುವ ಮೂಲಕ ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ನಾಲ್ಕು ನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ಟಿಪಿ ಸುಕುಮಾರ್, ನಾಪೋಕ್ಲು ಬ್ಲಾಕ್ ಅಧ್ಯಕ್ಷರಾದ ಸೌಕತ್ ಆಲೀ, ಮಡಿಕೇರಿ ಬ್ಲಾಕ್ ಅಧ್ಯಕ್ಷರಾದ ಕೊಟ್ಟಮುಡಿ ಹಂಸ, ನಾಪೋಕ್ಲು ಬ್ಲಾಕ್ ಮಾಜಿ ಅಧ್ಯಕ್ಷರು ಇಸ್ಮಾಯಿಲ್, ಡಿಸಿಸಿ ಉಪಾಧ್ಯಕ್ಷರು ಅಬ್ದುಲ್ ರೆಹಮಾನ್, ವಲಯ ಅಧ್ಯಕ್ಷರು ಕುಶಾಲಪ್ಪ, ವಕೀಲರು ಹಾಗೂ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಕಾನೂನು ಸಲಹೆಗಾರರು ಪವನ್ ಪೆಮ್ಮಯ್ಯ, ಪಂಚಾಯಿತಿ ಮಾಜಿ ಅಧ್ಯಕ್ಷರು ವನಜಾಕ್ಷಿ, ಮಾಜಿ ಸದಸ್ಯರು ಅರುಣ್ ಬೇಬ, ಹೇಮಾವತಿ, ಕಕ್ಕಬೆ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಕಲಿಯಂಡ ಸಂಪನ್ ಅಯ್ಯಪ್ಪ, ಪಕ್ಷದ ಮುಖಂಡರು ಬೋಳಚೇಟ್ಟಿರ ಸುರೇಶ್ ,ಮುತ್ತಪ್ಪ, ಕಾಳಿಮಾಡ ದೀಪು ಸುಬ್ಬಯ್ಯ, ಕುಂಡಚ್ಚಿರ ಮಂಜು ದೇವಯ್ಯ, ಉದಯ ಮಾದಪ್ಪ, ಯುವ ನಿರೂಪ್, ಪ್ರಿತುನ್ ಪೂವಣ್ಣ ಅಯ್ಯನೆರವಂಡ ಹಾಗೂ ನಾಲ್ಕು ನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಸದಸ್ಯರು,ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ವರದಿ: ಪ್ರಿತುನ್ ಪೂವಣ್ಣ
