ಶಾಸಕ ಯಶ್ ಪಾಲ್ ಸುವರ್ಣ ಹುಟ್ಟುಹಬ್ಬ : ಗುಂಡಿಬೈಲ್ ಶನೇಶ್ವರ ಕ್ಷೇತ್ರದಲ್ಲಿ ಹೂವಿನ ಪೂಜೆ

0
7

ಉಡುಪಿ : ನೆಚ್ಚಿನ ಶಾಸಕರಾದ ಯಶ್ ಪಾಲ್ ಸುವರ್ಣ ಅವರ ಹುಟ್ಟುಹಬ್ಬದ ಪ್ರಯುಕ್ತ, ಉಡುಪಿಯ ಕಾರ್ಣಿಕದ ಕ್ಷೇತ್ರವಾದ ಗುಡಿಬೈಲ್ ಶ್ರೀ ಶನೇಶ್ವರ ಕ್ಷೇತ್ರದಲ್ಲಿ ಗುಂಡಿಬೈಲು ವಾರ್ಡ್ ಬಿಜೆಪಿ ವತಿಯಿಂದ ಹೂವಿನ ಪೂಜೆ ನೆರವೇರಿಸಲಾಯಿತು.

ಈ ಶುಭ ಸಂದರ್ಭದಲ್ಲಿ ಗುಂಡಿಬೈಲು ವಾರ್ಡಿನ ನಗರಸಭಾ ಸದಸ್ಯರು ಹಾಗೂ ಉಡುಪಿ ನಗರಸಭೆಯ ನಿಕಟಪೂರ್ವ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಶನೇಶ್ವರ ಕ್ಷೇತ್ರದ ಅಧ್ಯಕ್ಷರಾದ ಶೇಖರ್ ಜತ್ತನ್ , ಪುರೋಹಿತರು, ಶನೇಶ್ವರ ಕ್ಷೇತ್ರದ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ವಿನೋದ್ ಶೆಟ್ಟಿ, ಸಂಘಟನೆ ಕಾರ್ಯದರ್ಶಿ ಭವಿಷ್, ಗುಂಡಿಬೈಲು ಬಿಜೆಪಿ ವಾರ್ಡ್ ಅಧ್ಯಕ್ಷರಾದ ನವೀನ್ ಕೋಟ್ಯಾನ್, ಕಾರ್ಯಕರ್ತರಾದ ದಿನೇಶ್ ಪೂಜಾರಿ, ನರಸಿಂಹ ಎಸ್.ಆರ್ ಹಾಗೂ ವಾರ್ಡಿನ ಎಲ್ಲಾ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಶಾಸಕರಾದ ಯಶ್ ಪಾಲ್ ಸುವರ್ಣ ಅವರು ಆರೋಗ್ಯ, ಆಯಸ್ಸು, ಜನಸೇವೆಯಲ್ಲಿ ಮತ್ತಷ್ಟು ಯಶಸ್ಸು ಕಾಣಲಿ ಎಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ವರದಿ: ವಿನೋದ್ ಶೆಟ್ಟಿ, ಉಡುಪಿ