‘ಮೋಕೆದ ಅಮ್ಮ’ ತುಳು ಶಾರ್ಟ್ ವಿಡಿಯೋ ಸಾಂಗ್ ಶೀಘ್ರದಲ್ಲೇ ಬಿಡುಗಡೆ

0
10

ಮಂಗಳೂರು : ತುಳು ಸಂಗೀತ ಪ್ರೇಮಿಗಳಿಗಾಗಿ ಮತ್ತೊಂದು ಮನಮುಟ್ಟುವ ಹಾಡು ಸಿದ್ಧವಾಗಿದ್ದು, ‘ಮೋಕೆದ ಅಮ್ಮ’ ಎಂಬ ತುಳು ಶಾರ್ಟ್ ವಿಡಿಯೋ ಸಾಂಗ್ ಬಿಡುಗಡೆಯಾಗಲಿದೆ.

ತಾಯಿ ಮತ್ತು ಮಗುವಿನ ಭಾವನಾತ್ಮಕ ಸಂಬಂಧವನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಈ ಹಾಡನ್ನು ನಿರ್ಮಿಸಲಾಗಿದ್ದು, ಪೋಸ್ಟರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. “A Mother’s Love is the Heartbeat of Life” ಎಂಬ ಸಂದೇಶದೊಂದಿಗೆ ಹಾಡಿನ ಪೋಸ್ಟರ್ ಅನಾವರಣಗೊಂಡಿದೆ.

ಈ ಹಾಡಿನ ಸಾಹಿತ್ಯವನ್ನು ಸುಬ್ರಹ್ಮಣ್ಯ ಪೆರ್ಡೂರು ಇವರು ರಚಿಸಿದ್ದು, ರಕ್ಷಿತ್ ಆಮೀನ್ ಗಾಯನ ನೀಡಿದ್ದಾರೆ. ತಾಯಿಯ ಪ್ರೀತಿ, ತ್ಯಾಗ ಹಾಗೂ ಮಮತೆಯ ಭಾವನೆಗಳನ್ನು ಹಾಡಿನ ಮೂಲಕ ಮನಮುಟ್ಟುವ ರೀತಿಯಲ್ಲಿ ಕಟ್ಟಿಕೊಡಲಾಗಿದೆ ಎಂದು ತಂಡ ತಿಳಿಸಿದೆ.

ತುಳು ಭಾಷೆಯ ಸಾಂಸ್ಕೃತಿಕ ಮೌಲ್ಯಗಳನ್ನು ಒಳಗೊಂಡ ಈ ಶಾರ್ಟ್ ವಿಡಿಯೋ ಸಾಂಗ್ ತುಳುನಾಡಿನ ಸಂಗೀತಾಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದ್ದು, ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

LEAVE A REPLY

Please enter your comment!
Please enter your name here