ನಂದಾದೀಪಾ ಜ್ಞಾನವಿಕಾಸ ಕೇಂದ್ರದ ಮಾಸಿಕ ಸಭೆ ಹಾಗೂ ಯೋಗದ ಮಹತ್ವ ಬಗ್ಗೆ ಮಾಹಿತಿ ಕಾರ್ಯಕ್ರಮ

0
21

ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ )ವಿಟ್ಲ ತಾಲೂಕಿನ ಕಲ್ಲಡ್ಕ ವಲಯದ ಮಾಮೇಶ್ವರ ಕಾರ್ಯಕ್ಷೇತ್ರದ ನಂದಾದೀಪಾ ಜ್ಞಾನ ವಿಕಾಸ ಕೇಂದ್ರದ ಮಾಸಿಕ ಸಭೆಗೆಯು ಮಾರ್ಚ್ 14ರ ಆದಿತ್ಯವಾರ ಮಾಮೇಶ್ವರದಲ್ಲಿ ಜರಗಿತು

ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲತಾಲೂಕು ಯೋಜನಾಧಿಕಾರಿ ಸುರೇಶ್ ಸರ್ ಜ್ಞಾನವಿಕಾಸದ ಕಾರ್ಯಕ್ರಮಗಳ ಉದ್ದೇಶ ಹಾಗೂ ಕೇಂದ್ರದಲ್ಲಿ ನೀಡುವ ಮಾಹಿತಿಯನ್ನು ಪಡೆದು ಹೇಗೆ ನಮ್ಮ ಜೀವನದಲ್ಲಿ ಆಳವಡಿಸಿ ಸ್ವಾವಲಂಬಿಗಳಾಗಬಹುದು ಎಂಬುದಾಗಿಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ಜ್ವಲಂತ ಕಾರ್ಯಕ್ರಮದಡಿಯಲ್ಲಿ ಯೋಗದ ಮಹತ್ವ ಹಾಗೂ ಯೋಗ ಮಾಡುವ ವಿಧಾನದ ಬಗ್ಗೆ ಯೋಗ ಶಿಕ್ಷಕರಾದ ಕುಶಾಲಪ್ಪ ಮಾಹಿತಿ ನೀಡಲಾಯಿತು.

ಮಾಮೇಶ್ವರ ಒಕ್ಕೂಟ ಅಧ್ಯಕ್ಷರಾದ ಹರೀಶ್, ಕೇಂದ್ರದ ಸದಸ್ಯರಾದ ಕುಸುಮ, ಒಕ್ಕೂಟ ಸದಸ್ಯರಾದ ಉಮೇಶ್, ಜ್ಞಾನ ವಿಕಾಸ ಸಮನ್ವಯಧಿಕಾರಿ ದೀಪ, ವೇದಿಕೆಯಲ್ಲಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here