ಮೂಡುಬಿದಿರೆ: ಯುವ ಬಿರುವೆರ್ (ರಿ.) ಮಾಂಟ್ರಾಡಿ & ಮಹಿಳಾ ಘಟಕ ಮಾಂಟ್ರಾಡಿ ಸಂಘಟನೆಯ ನೇತೃತ್ವದಲ್ಲಿ ಉದ್ಘಾಟನೆಗೊಂಡ ಓಂಕಾರ ಕುಣಿತ ಭಜನಾ ಮಂಡಳಿ ಮಾಂಟ್ರಾಡಿ ತಂಡದ ವತಿಯಿಂದ ಭಜನಾ ತಂಡದ ಮಕ್ಕಳಿಗೆ ಪ್ರತಿ ವರ್ಷದಂತೆ 2025-2026 ಸಾಲಿನ ಪುಸ್ತಕ ವಿತರಣಾ ಕಾರ್ಯಕ್ರಮ ಪೆಂಚಾರು ಶಾಲೆಯಲ್ಲಿ ನಡೆಯಿತು.
ಅತಿಥಿಗಳಾಗಿ ಅಣ್ಣಿ ಪೂಜಾರಿ ಪಂಚಾಯತ್ ಸದಸ್ಯರು ಮಂಟ್ರಾಡಿ, ಮಧುಸೂದನ್ ಪೂಜಾರಿ ಅಧ್ಯಕ್ಷರು ಯುವ ಬಿರುವರ್ ಮಂಟ್ರಾಡಿ, ಜನಿತ ಅಧ್ಯಕ್ಷರು ಯುವ ಬಿರುವೆರ್ ಮಹಿಳಾ ಘಟಕ, ಪ್ರಸಾದ್ ಪೂಜಾರಿ ಭಜನಾ ನಿರ್ದೇಶಕರು, ವಿಜಯ್ ನೀರ್ಕೆರೆ ಭಜನಾ ತರಬೇತುದಾರರು, ಬೇಬಿ ಮುಖ್ಯ ಶಿಕ್ಷಕಿ ಮಕ್ಕಿ ಶಾಲೆ, ವಸಂತಿ, ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು.
ಸಂಘಟನಾ ಪ್ರಮುಖರದ ನಾಗೇಶ್ ಪೂಜಾರಿ, ಕಿಶನ್ ಪೂಜಾರಿ, ದಿನೇಶ್ ಪೂಜಾರಿ, ಉಮೇಶ್ ಪೂಜಾರಿ, ಅಶ್ವಿನ್ ಪೂಜಾರಿ, ಕಾರ್ತಿಕ್ ಪೂಜಾರಿ ಉಪಸ್ಥಿತಿ ಇದ್ದರು.