Saturday, June 14, 2025
HomeUncategorizedಮಂಗಳೂರಿನಲ್ಲಿ ತುರ್ತು ಸ್ಪಂದನಾ ತಂಡ; ತುರ್ತು ಧಾವಿಸಲು ಸಜ್ಜಾದ ಶೌರ್ಯ ಸ್ವಯಂಸೇವಕರು.

ಮಂಗಳೂರಿನಲ್ಲಿ ತುರ್ತು ಸ್ಪಂದನಾ ತಂಡ; ತುರ್ತು ಧಾವಿಸಲು ಸಜ್ಜಾದ ಶೌರ್ಯ ಸ್ವಯಂಸೇವಕರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವತಿಯಿಂದ ಅನುಷ್ಠಾನ ಮಾಡಲಾಗುತ್ತಿರುವ
ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿ ಮಂಗಳೂರು ತಾಲೂಕಿನ ಘಟಕಗಳ ಸಂಯೋಜಕರು ಮತ್ತು ಘಟಕ ಪ್ರತಿನಿಧಿಗಳ ಸಭೆಯನ್ನು ಯೋಜನಾ ಕಚೇರಿಯಲ್ಲಿ ನಡೆಸಲಾಯಿತು.

ಮಂಗಳೂರು ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಗಳಾದ ಶ್ರೀ ಸುರೇಂದ್ರ ಕುಮಾರ್ ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. “ನಮ್ಮ ತಾಲೂಕಿನಲ್ಲಿ ಈಗಾಗಲೇ ಮಳೆಗಾಲ ಸಂದರ್ಭದಲ್ಲಿ ಅನಾಹುತಗಳು ಉಂಟಾಗುತ್ತಿದ್ದು, ಶೌರ್ಯ ಸ್ವಯಂಸೇವಕರು ಅಲ್ಲಿಗೆ ಧಾವಿಸಿ ತಮ್ಮ ಸೇವೆಯನ್ನು ನೀಡುತ್ತಿದ್ದಾರೆ. ವ್ಯಾಪಕ ಮಳೆಯಿಂದ ಸಂಭವಿಸಬಹುದಾದ ಅನಾಹುತಗಳನ್ನು ತಡೆಯುವ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಂಡು ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದರು.

ಕೇಂದ್ರ ಕಚೇರಿಯ ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿಗಳಾದ ಶ್ರೀ ಜೈವಂತ್ ಪಟಗಾರ್ ಇವರು ವಿಪತ್ತು ನಿರ್ವಹಣೆಯ ಸಂದರ್ಭದಲ್ಲಿ ಸಾಂಘಿಕ ಪ್ರಯತ್ನ, ಲಭ್ಯವಿರುವ ರಕ್ಷಣಾ ಪರಿಕರಗಳ ಬಳಕೆ, NDRF, SDRF, ಅಗ್ನಿಶಾಮಕ ದಳದ ಜೊತೆಗೆ ಸೇರಿಕೊಂಡು ಕಾರ್ಯಾಚರಣೆ ನಡೆಸುವ ಬಗ್ಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ತುರ್ತು ಸ್ಪಂದನೆಗೆ ಅನುಕೂಲವಾಗುವಂತೆ ವಿಶೇಷ ಕೌಶಲ್ಯ ಹೊಂದಿರುವ ಸ್ವಯಂಸೇವಕರನ್ನು ಗುರುತಿಸಿ ತುರ್ತು ಸ್ಪಂದನಾ ತಂಡವನ್ನು ರಚನೆ ಮಾಡಲಾಯಿತು.

ತುರ್ತು ತಂಡಕ್ಕೆ ಪ್ರತಿನಿಧಿಗಳನ್ನಾಗಿ ಸತೀಶ್ ದೀಪಂ ಮತ್ತು ಮಾಧವ ಇವರನ್ನು ಆಯ್ಕೆ ಮಾಡಲಾಯಿತು.

ತುರ್ತು ಸ್ಪಂದನಾ ತಂಡದ ಸದಸ್ಯರನ್ನಾಗಿ ಹರೀಶ್ ಶೆಟ್ಟಿ, ಪ್ರಕಾಶ್, ಸುರೇಶ್, ವಿಜಯ ಭಂಡಾರಿ, ಪವನ್, ಲೋಹಿತ್, ಪ್ರಸಾದ್, ರವೀಂದ್ರ, ಭಾಗ್ಯವತಿ, ರೇಣುಕಾ, ಶ್ರೀನಿವಾಸ್, ಭಾಗೀರಥಿ, ಕೇಶವ್, ಕವಿತಾ, ಪ್ರವೀಣ್ ಇವರು ಆಯ್ಕೆಯಾಗಿರುತ್ತಾರೆ.

ಈ ಸಂದರ್ಭದಲ್ಲಿ ಮಂಗಳೂರು ಶೌರ್ಯ ಸಮಿತಿಯ ಮಾಸ್ಟರ್ ಸತೀಶ್ ದೀಪಂ, ಕ್ಯಾಪ್ಟನ್ ಹರೀಶ್ ಶೆಟ್ಟಿ, ಜನಜಾಗೃತಿ ಮೇಲ್ವಿಚಾರಕ ನಿತೇಶ್ ಕೆ, ತಾಲೂಕು ವಿಚಕ್ಷಣಾಧಿಕಾರಿ ನೀಲಯ್ಯ, ಎಲ್ಲಾ ಘಟಕಗಳ ಘಟಕ ಪ್ರತಿನಿಧಿಗಳು, ಸಂಯೋಜಕರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular