ಮೂಡುಬಿದಿರೆ : ಫೆ.26ರಂದು ಬ್ರಹತ್ ಸಂತ ಸಮ್ಮೇಳನ – ಡಾ.ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

0
66

ಇಲ್ಲಿನ ಜೈನ ಮಠದ ಆಶ್ರಯದಲ್ಲಿ ಮೂಡುಬಿದಿರೆ ಮಹಾವೀರ ಭವನದಲ್ಲಿ ಫೆಬ್ರವರಿ 26 ರಂದು ಜರುಗಲಿರುವ ಸಂತ ಸಮ್ಮೇಳನದ ಯಶಸ್ಸಿಗೆ ಪೂರ್ವಭಾವಿಯಾಗಿ ಜೈನಮಠ ದಲ್ಲಿ ಮಠಾಧೀಶರಾದ ಡಾ. ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮಿಗಳ ಉಪಸ್ಥಿತಿಯಲ್ಲಿ ಸಮಾಲೋಚನಾ ಸಭೆ ಜರುಗಿತು.

ಹರಿಹರಪುರ ಮಠದ ಸ್ವಾಮಿಗಳ ಆಶಯದಂತೆ ಸನಾತನ ಧರ್ಮದ ಐಕ್ಯತೆಗಾಗಿ ಬ್ರಹತ್ ಸಂತ ಸಮಾವೇಶ ಇಲ್ಲಿ ಪ್ರಪ್ರಥಮವಾಗಿ ಆಯೋಜಿಸಲಾಗಿದ್ದು,ಭಾರತೀಯ ಸಂತ ಪರಿಷತ್ ಪ್ರವರ್ತಕ ಮಂಡಳಿಯ ನಾಲ್ಕು ಜಿಲ್ಲೆಯ 50 ರಷ್ಟು ಸಾಧು ಸಂತರು ಪಾಲ್ಗೊಂಡು ವಿವಿಧ ವಿಚಾರಗಳ ಬಗ್ಗೆ ಚರ್ಚಿಸಲಿರುವರು ಎಂದು ಸಭೆಯಲ್ಲಿ ಡಾ .ಭಟ್ಟಾರಕ ಸ್ವಾಮೀಜಿಗಳು ಪೂರ್ಣ ಮಾಹಿತಿ ನೀಡಿದರು.

ಮುಂದಿನ ದಿನಗಳಲ್ಲಿ ತಮ್ಮ ನೇತೃತ್ವದಲ್ಲಿ ಎಲ್ಲಾ ವರ್ಗದ ಗಣ್ಯರನ್ನೊಳಗೊಂಡ ಸ್ವಾಗತ ಸಮಿತಿಯನ್ನು ರಚಿಸುವ ಬಗ್ಗೆ ಸ್ವಾಮಿಗಳು ತಿಳಿಸಿದರು. ಮಠದ ವ್ಯವಸ್ಥಾಪಕರಾದ ಸಂಜಯಂತ ಕುಮಾರ್ ಶೆಟ್ಟಿ,ಸುದೇಶ್ ಕುಮಾರ್ ಪಟ್ಟಣಶೆಟ್ಟಿ,ವಿಶ್ವ ಹಿಂದೂ ಪರಿಷತ್ ನ ಶಾಂತಾರಾಮ ಕುಡ್ವ, ಭಾರತ್ ಜಾಗರಣ ಮಂಚ್ ನ ರಾಜ್ಯ ಪ್ರಮುಖ್ ಶಿವ ಭಂಡಾರ್ಕರ,ಗೋ ರಕ್ಷಣಾ ರಥಯಾತ್ರೆಯ ಪ್ರಮುಖ್,ವಾಸ್ತು ತಜ್ಞ ಎಂ ರಾಘವೇಂದ್ರ ಭಂಡಾರ್ಕರ್ ಶಾಂತಿರಾಜ ಕಂಬಳಿ, ಜಯರಾಜ ಕಂಬಳಿ, ಗಣೇಶ್ ಮಲ್ಯ,ಪ್ರಸನ್ನ ಶೆಣೈ,ಮಂಜುನಾಥ ಪೈ ಅಲಂಗಾರು ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here