ರೋಟರಿ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆ ಇದರ ಸಹಯೋಗದಲ್ಲಿ ಶ್ರೀ ಶಾರದಾ ನಾಟ್ಯಾಲಯ ಮೂಡುಬಿದಿರೆ ನಡೆಸುವ ಚಿಗುರು ಹಬ್ಬ ಮಕ್ಕಳ ಬೇಸಿಗೆ ಶಿಬಿರ 2026 ಇದೇ ಬರುವ ಏಪ್ರಿಲ್ 12 ರಿಂದ ಏಪ್ರಿಲ್ 21 ರವರೆಗೆ 10 ದಿನಗಳ ಕಾಲ ರೋಟರಿ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ನಡೆಯಲಿದೆ. ಈ ಶಿಬಿರದಲ್ಲಿ ನಾಡಿನ ಹೆಸರಾಂತ ಕಲಾವಿದರು ಸಂಪನ್ಮೂಲ ವ್ಯಕ್ತಿಯಾಗಿ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ಯೋಗ, ರಂಗ ಕಲೆ, ಚಿತ್ರಕಲೆ, ಜಾನಪದ ಲೋಕ, ಸಂಗೀತ ಲೋಕ, ಯಕ್ಷಲೋಕ, ಪಕ್ಷಿ ಪ್ರಪಂಚ , ಮಣ್ಣಿನಿಂದ ಮಾದರಿ ತಯಾರಿ, ಕಸದಿಂದ ರಸ , ಕರಕುಶಲ ವಸ್ತುಗಳ ತಯಾರಿ, ನಾಟ್ಯ-ಆಟ-ಪಾಠ, ಸಾಂಪ್ರದಾಯಿಕ ಆಟಗಳು, ಹೊರಸಂಚಾರ ಹೀಗೆ ವಿಭಿನ್ನ ರೀತಿಯ ಚಟುವಟಿಕೆಗಳು ನುರಿತ ಕಲಾವಿದರಿಂದ ಮೂಡಿ ಬರಲಿದೆ. ಶ್ರೀ ಶಾರದಾ ನಾಟ್ಯಾಲಯದ ನಿರ್ದೇಶಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೀ ಮೋಹನ್ ಹೊಸ್ಮಾರ್ ಇವರ ನಿರ್ದೇಶನದಲ್ಲಿ ಈ ಶಿಬಿರವು ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

