Saturday, April 26, 2025
HomeUncategorizedಮೂಡುಬಿದಿರೆ: ಭಕ್ತಿ ರಥಕ್ಕೆ ಭಕ್ತಿ ಪೂರ್ವಕ ಅದ್ದೂರಿಯ ಸ್ವಾಗತ

ಮೂಡುಬಿದಿರೆ: ಭಕ್ತಿ ರಥಕ್ಕೆ ಭಕ್ತಿ ಪೂರ್ವಕ ಅದ್ದೂರಿಯ ಸ್ವಾಗತ

ಮೂಡುಬಿದಿರೆ ಶ್ರೀ ಜೈನ ಮಠದ ಬಳಿ 4.4.2025 ಶುಕ್ರವಾರ ಭಕ್ತಿ ರಥಕ್ಕೆ ಭಕ್ತಿ ಪೂರ್ವಕ ಅದ್ದೂರಿಯ ಸ್ವಾಗತ ಮಾಡಲಾಯಿತು. ಶ್ರೀ ರಾಮ ಸೀತಾ ಮಾತ ಹನುಮಾನ್ ದೇವರು, ಮದ್ವಾಚಾರ್ಯ ಮೂರ್ತಿ ಇದ್ದ ಭಕ್ತಿ ರಥ ಕ್ಕೆ ಜೈನ ಮಠ ದ ಪ.ಪೂ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿ ಸ್ವಾಗತ ಮಾಡಿದರು. ಶ್ರೀ ಮಠ ದ ಬಳಿ ಆರತಿ ಬೆಳಗಿ ಹಣ್ಣು ಕಾಯಿ ಫಲ ಸಮರ್ಪಣೆ, ಮಾಡಲಾಯಿತು.
ಮೂಡು ಬಿದಿರೆ ಸ್ವಾಮೀಜಿಯವರನ್ನು ರಥದ ಉಸ್ತುವಾರಿ ವಹಿಸಿ ಕೊಂಡ ಕೃಷ್ಣರಾಜ್ ಕುತ್ಪಾಡಿ, ವೇಣೂರು
ಶಶಾoಕ ಭಟ್ಯವರು ಪೇಜಾವರ ಶ್ರೀ ಗಳ ನೇತ್ರತ್ವದಲ್ಲಿ ಏಪ್ರಿಲ್ 13ನೇ ತಾರೀಕು ಪೇರ್ಣoಕಿಲದಲ್ಲಿ ಜರುಗಲಿರುವ ಸಂತ ಸಮಾವೇಶ ಕ್ಕೆಅಹ್ವಾನ ನೀಡಿದರು. ಸುದರ್ಶನ್, ಶ್ರೀ ಶ್ರೀಪತಿ ಭಟ್ ಪಟ್ಣ ಶೆಟ್ಟಿ ಸುದೇಶ್ ಕುಮಾರ್, ಸಂಜಯಂತ ಕುಮಾರ್ ಶೆಟ್ಟಿ ವ್ಯವಸ್ಥಾಪಕರು, ರಾಘವೇಂದ್ರ ಭಂಡಾರ್ಕರ್ ಪ್ರವೀಣ್, ಕುಣಿತ ಭಜನೆ ವಾಲಗ ಚೆಂಡೆ ಜಯ ಘೋಷಣೆ ಮೂಲಕ ಜೈನಪೇಟೆ, ಸ್ವಸ್ತಿಶ್ರೀ ಕಾಲೇಜು ಬಡಗ ಬಸದಿ ಮಾರ್ಗವಾಗಿ
ರಥ ಅಲಂಗಾರು ಕಡೆಗೆ ಬಿಳ್ಕೊಡಲಾಯಿತು.

RELATED ARTICLES
- Advertisment -
Google search engine

Most Popular