ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ವಿಶ್ವವಿದ್ಯಾನಿಲಯ ಕಾಲೇಜು ಬನ್ನಡ್ಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಮಹಾವೀರ ಕಾಲೇಜು ಮೈದಾನದಲ್ಲಿ ನಡೆದ ಅಂತರ ಕಾಲೇಜು ಸಾಫ್ಟ್ ಬಾಲ್ ಪಂದ್ಯಾವಳಿಯ
ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರಾಧಾಕೃಷ್ಣ ಹೆಚ್.ಬಿ. ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿದರು. ಕಾರ್ಕಳದ ಎಂ.ಪಿ.ಎಂ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಡಾ|| ಜಯಭಾರತಿ ಮಾತನಾಡಿ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಕಠಿಣ ಪರಿಶ್ರಮ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಬನ್ನಡ್ಕ ವಿಶ್ವವಿದ್ಯಾನಿಲಯ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರತ್ನಾಕರ ಪುತ್ರಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿಶ್ವಕಪ್ ಕಬಡ್ಡಿ ವಿಜೇತ ಆಟಗಾರ್ತಿ ಕು|| ಧನಲಕ್ಷ್ಮಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಪಂದ್ಯಾವಳಿಯ ಫಲಿತಾಂಶಗಳು:
ಮಹಿಳಾ ವಿಭಾಗ:
ಪ್ರಥಮ ಸ್ಥಾನ: ಆಳ್ವಾಸ್ ಕಾಲೇಜು, ಮೂಡುಬಿದಿರೆ. ದ್ವಿತೀಯ ಸ್ಥಾನ: ವಿಶ್ವವಿದ್ಯಾನಿಲಯ ಕಾಲೇಜು ಬನ್ನಡ್ಕ. ತೃತೀಯ ಸ್ಥಾನ: ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆ. ನಾಲ್ಕನೇ ಸ್ಥಾನ: ಡಾ|| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ.
ಪುರುಷರ ವಿಭಾಗ:
ಪ್ರಥಮ ಸ್ಥಾನ: ಶ್ರೀ ಮಹಾವೀರ ಕಾಲೇಜು, ಮೂಡುಬಿದಿರೆ. ದ್ವಿತೀಯ ಸ್ಥಾನ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಾಮದಪದವು. ತೃತೀಯ ಸ್ಥಾನ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ತಂಗಡಿ.ನಾಲ್ಕನೇ ಸ್ಥಾನ: ಡಾ|| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ.
ವೈಯಕ್ತಿಕ ಪ್ರಶಸ್ತಿಗಳು (ಪುರುಷರ ವಿಭಾಗ):
ಅತ್ಯುತ್ತಮ ಪಿಚ್ಚರ್: ಶಶಿಧರ್ (ಶ್ರೀ ಮಹಾವೀರ ಕಾಲೇಜು). ಅತ್ಯುತ್ತಮ ಕ್ಯಾಚರ್: ಪವನ್ (ವಾಮದಪದವು). ಉತ್ತಮ ಬ್ಯಾಟರ್: ಪವನ್ ಕುಮಾರ್ (ಬೆಳ್ತಂಗಡಿ). ಸರಣಿ ಶ್ರೇಷ್ಠ ಆಟಗಾರ: ಅಭಿಶ್ರಿತ್ (ಮಹಾವೀರ ಕಾಲೇಜು). ವೈಯಕ್ತಿಕ ಪ್ರಶಸ್ತಿಗಳು (ಮಹಿಳಾ ವಿಭಾಗ): ಅತ್ಯುತ್ತಮ ಪಿಚರ್: ಜನನಿ (ಆಳ್ವಾಸ್ ಕಾಲೇಜು). ಅತ್ಯುತ್ತಮ ಕ್ಯಾಚರ್: ಸಂಗೀತ (ಬನ್ನಡ್ಕ ಕಾಲೇಜು). ಉತ್ತಮ ಬ್ಯಾಟರ್: ನಳಿನಾಕ್ಷಿ (ಆಳ್ವಾಸ್ ಕಾಲೇಜು). ಸರಣಿ ಶ್ರೇಷ್ಠ ಆಟಗಾರ್ತಿ: ಶರಣ್ಯ ಪುತ್ರಾಯ (ಎಂ.ಪಿ.ಎಂ. ಕಾಲೇಜು ಕಾರ್ಕಳ).
ಉಪನ್ಯಾಸಕರಾದ ಸುಧಾಕರ್ ಕಾರ್ಯಕ್ರಮ ನಿರೂಪಿಸಿದರು ಮತ್ತು ಸಂತೋಷ್ ವಂದಿಸಿದರು.
ವರದಿ : ರಾಯಿ ರಾಜ ಕುಮಾರ

