ಮೂಡುಬಿದಿರೆ ಶ್ರೀ ದಿಗಂಬರ ಜೈನ ಮಠದ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ ಅಂತ ರಾಷ್ಟ್ರೀಯ ಯೋಗ ದಿನ ವಾದ ಶನಿವಾರ 21.06.2025 ರಂದು ವಿದ್ಯಾರ್ಥಿ ವಿದ್ಯಾರ್ಥಿನೀಯರುಗಳಿಗೆ ಬೆಳಿಗ್ಗೆ 9.00 ಗಂಟೆ ಗೆ ರಮಾ ರಾಣಿ ಶೋಧ ಸಂಸ್ಥಾನದ ಭಟ್ಟಾರಕ ಸಭಾಂಗಣ ದಲ್ಲಿ ವಿವಿಧ ಯೋಗಾ ಸನಾ,ಪ್ರಾಣಯಾಮ,ಕಲಿಸಿದರು ಸ್ವಾಮೀಜಿ ಪರ್ವತ ಆಸನ, ಮಯೂರ ಆಸನ, ಸರ್ವಾoಗ ಆಸನ, ಆಸನಗಳ ರಾಜ ಶಿರ್ಷಾ ಸನಾ ವನ್ನು ಮಾಡಿ ತೋರಿಸಿ ಅದರ ಪ್ರಯೋಜನ ತಿಳಿಸಿದರು.
ಯೋಗ ಧರ್ಮ ಭಕ್ತಿ,ಕರ್ಮ, ರಾಜ, ಧ್ಯಾನ ಯೋಗ ಆತ್ಮ ನನ್ನು ಮಹಾತ್ಮ ನನ್ನಾಗಿ ಮಾಡುದು ಪರಮಾತ್ಮ ನ ಆನಂದ ನೀಡುದು ತೃಪ್ತಿಕರ ಜೀವನವನ್ನು ನಡೆಸಲು ಭಾವನಾತ್ಮಕ ಯೋಗಕ್ಷೇಮವು ದೈಹಿಕ ಆರೋಗ್ಯದಷ್ಟೇ ಮುಖ್ಯವಾಗಿದೆ. ಸ್ವಯಂ ಅರಿವು ಮತ್ತು ಆತ್ಮಾವಲೋಕನವನ್ನು ಪ್ರೋತ್ಸಾಹಿಸುತ್ತದೆ, .
ಮಾನಸಿಕ ಮನಸ್ಸನ್ನು ಶಾಂತಗೊಳಿಸಲು, ಆತಂಕವನ್ನು ಕಡಿಮೆ ಮಾಡಲು ಮತ್ತು ವಿದ್ಯಾರ್ಥಿ ಗಳಿಗೆ ಅರಿವಿನ ಕಾರ್ಯವನ್ನು ಹೆಚ್ಚಿಸಲು, ಉದ್ಯೋಗಿ ಗಳಿಗೆ ಒತ್ತಡ ಕಡಿಮೆ ಗೊಳ್ಳಲು ಸಹಾಯ ಮಾಡುತ್ತದೆ ಎಂದು ನುಡಿದರು. ಸ್ವಸ್ತಿಶ್ರೀ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಸೌಮ್ಯಶ್ರೀ ಸ್ವಾಗತಿಸಿ ದರು ಉಪನ್ಯಾಸಕ ರಾದ ಹಿತೇಶ್, ಸುಜಾತಾ ಉಪಸ್ಥಿತರಿದ್ದರು