ಮೂಡುಬಿದಿರೆ: ಸುವರ್ಣ ಕರ್ನಾಟಕ ರಾಜ್ಯ ಸಮಿತಿ ಜೈ ಭೀಮ್ ಸೇನೆ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮೂಡುಬಿದಿರೆ ಆಡಳಿತ ಸೌಧ ಮುಂಭಾಗದಲ್ಲಿ ನಾಳೆ (ಎ 20) ರಂದು ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಅಂಬೇಡ್ಕರ್ ಜಯಂತೋತ್ಸವ ನಡೆಯಲಿದೆ.
ವೈಲೆನ್ ಚೆಂಡೆ, ಹುಲಿ ವೇಷ, ನಾಸಿಕ್ ಬ್ಯಾಂಡ್ ಗಳೊಂದಿಗೆ ಬಾಬಾ ಸಾಹೇಬರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದ್ದು. ಶಾಸಕ ಉಮಾನಾಥ ಎ.ಕೋಟ್ಯಾನ್ ಸಭೆಯಲ್ಲಿ ಅಧ್ಯಕ್ಷತೆ ವಹಿಸಲಿದ್ದಾರೆ, ಬಿಗ್ ಬಾಸ್ ಖ್ಯಾತಿಯ ವತೂ೯ರ್ ಸಂತೋಷ, ಚಿತ್ರ ನಟ ಸಂದೇಶ್, ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆಗೆ ತಿಳಿಸಿದರು.