ಮೂಡುಬಿದಿರೆ ಕೋಟಿ-ಚೆನ್ನಯ ಕಂಬಳಕೂಟಕ್ಕೆ ಜಿಲ್ಲಾಧಿಕಾರಿಗಳಿಂದ ವಿದ್ಯುಕ್ತ ಚಾಲನೆ; ಜವನೆರ್ ಬೆದ್ರ ಸಂಸ್ಥಾಪಕ ಅಮರ್ ಕೋಟೆ’ಗೆ ಗಣ್ಯರಿಂದ ಗೌರವ ಸನ್ಮಾನ

0
20

ಮೂಡುಬಿದಿರೆ : ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ನೇತೃತ್ವದಲ್ಲಿ ನಡೆಯಲಿರುವ ೨೩ನೇ ವರ್ಷದ ಕೋಟಿ-ಚೆನ್ನಯ ಕಂಬಳಕೂಟಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎ‍ಚ್.ವಿ ವಿದ್ಯುಕ್ತ ಚಾಲನೆಯನ್ನು ನೀಡಿದರು. ಕಂಬಳಕೂಟಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿಗಳು ನಮ್ಮ ಪರಂಪರೆಯನ್ನು ಉಳಿಸುವ ಕೆಲಸಗಳು ಈ ಕಂಬಳಕೂಟದ ಮೂಲಕ ನಡೆಯಬೇಕು ಎಂದು ಹೇಳಿ ಭಾಗವಹಿಸುವ ಎಲ್ಲಾ ಕಂಬಳದ ತಂಡಗಳಿಗೆ ಶುಭಾಶಯಗಳನ್ನು ತಿಳಿಸಿದರು.

ಜವನೆರ್ ಬೆದ್ರ ಸಂಸ್ಥಾಪಕ ಅಮರ್ ಕೋಟೆಗೆ ಗೌರವ ಸನ್ಮಾನ :

ಮೂಡುಬಿದಿರೆಯ ಮಣ್ಣಿನ ಮಗಳು ರಾಣಿ ಅಬ್ಬಕ್ಕ ಎಂಬ ವಿಶೇಷ ಅಭಿಯಾನದ ಜೊತೆಗೆ ಹಲವಾರು ಸಮಾಜಮುಖಿ ಕೆಲಸ ಕಾರ್ಯಗಳನ್ನು ಬಹಳ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಜವನೆರ್ ಬೆದ್ರ ಫೌಂಡೇಶನ್(ರಿ.) ಸಂಸ್ಥಾಪಕ ಅಮರ್ ಕೋಟೆ ಅವರಿಗೆ ಕಂಬಳ ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಗೌರವ ಸನ್ಮಾನ ಕಾರ್ಯವನ್ನು ನಡೆಸಲಾಯಿತು.

ಅಬ್ಬಕ್ಕಳ ಯಶೋಗಾಥೆ ವಿವರಿಸಿದ ಶ್ರೀಕಾಂತ್ ಶೆಟ್ಟಿ ಕಾರ್ಕಳ

ಮೂಡುಬಿದಿರೆ ಕಂಬಳ ಕೂಟದ ಮತ್ತೊಂದು ವಿಶೇಷವೆಂದರೆ ಅದು ವೀರರಾಣಿ ಅಬ್ಬಕ್ಕಳ ಪ್ರತಿಮೆಗೆ ಪುಷ್ಪಾರ್ಚನೆಯನ್ನು ಮಾಡುವ ಗೌರವ ಸಲ್ಲಿಸಲಾಯಿತು. ರಾಣಿ ಅಬ್ಬಕ್ಕಳ ೫೦೦ ನೇ ಜನ್ಮಶತಮಾನೋತ್ಸವದ ವಿಶೇಷ ಸಂಧರ್ಭದಲ್ಲಿ ರಾಣಿ ಅಬ್ಬಕ್ಕಳ ಸಾಹಸಗಾಥೆಯನ್ನು ಖ್ಯಾತ ಚಿಂತಕರಾದ ಶ್ರೀಕಾಂತ್ ಶೆಟ್ಟಿ ಕಾರ್ಕಳ ವಿವರಿಸಿದರು. ಭಾರತದ ಮೊಟ್ಟ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿರುವ ವೀರ ರಾಣಿ ಅಬ್ಬಕ್ಕಳ ಧೈರ್ಯ ಹಾಗೂ ಸಾಹಸ ಎಲ್ಲಾರಿಗೂ ಮಾದರಿ.

ಆಕೆಯ ಸಾಹಸಗಾಥೆಯನ್ನು ನಾವುಗಳೇ ತಿಳಿಯದಿರುವುದು ಬೇಸರದ ಸಂಗತಿ ಎಂದರು. ರಾಣಿ ಅಬ್ಬಕ್ಕಳು ಪೋರ್ಚುಗೀಸರ ವಿರುದ್ದ ಸರ್ಜಿಕಲ್ ಸ್ಟ್ರೈಕ್ ರೀತಿಯ ದಾಳಿಯನ್ನು ಆ ಸಂಧರ್ಭದಲ್ಲಿಯೇ ಮಾಡಿದ್ದಳು, ಒಟ್ಟು ೪ ಜನ ಅಬ್ಬಕ್ಕಂದಿರು ಆಳ್ವಿಕೆ ಮಾಡಿದ್ದರು ಇಬ್ಬರೂ ಉಳ್ಳಾಲದಿಂದ ಆಡಳಿತ ಮಾಡಿದರೆ, ಮತ್ತಿಬ್ಬರು ಬೆದ್ರದ ಪುತ್ತಿಗೆಯಿಂದ ಆಡಳಿತ ನಡೆಸಿದ್ದರು ಎಂದರು. ರಾಣಿ ಅಬ್ಬಕ್ಕ ಇಲ್ಲಿ ಆನೇಕ ಬಸದಿ, ದೇವಸ್ಥಾನಗಳನ್ನು ನಿರ್ಮಾಣ ಮಾಡಿದ್ದಾಳೆ ಎಂದು ತಿಳಿಸಿದರು. ಈ ಮೂಲಕ ರಾಣಿ ಅಬ್ಬಕ್ಕಳ ಸಾಹಸಗಾಥೆ ನಮಗೆಲ್ಲರಿಗೂ ಮಾದರಿ ಎಂದು ಬಣ್ಣಿಸಿದರು.

LEAVE A REPLY

Please enter your comment!
Please enter your name here