ಇಬ್ಬರು ಮಕ್ಕಳ ಚಿಕಿತ್ಸೆಯ ಸಹಾಯ ಹಸ್ತದ ನಿರೀಕ್ಷೆಯಲ್ಲಿ , ಆ ಪ್ರಯುಕ್ತ ವಿಶೇಷ ವೇಷ ಧರಿಸಿ ಸಹಾಯವನ್ನು ಕೋರಲಿದ್ದಾರೆ ನೇತಾಜಿ ಬಿಗ್ರೇಡ್ (ರಿ) ಮೂಡುಬಿದೆರೆ
ನೇತಾಜಿ ಬ್ರಿಗೇಡ್ (ರಿ.) ಮೂಡುಬಿದಿರೆ ವತಿಯಿಂದ 22ನೇ ಸೇವಾ ಯೋಜನೆಯನ್ನು “ಭರವಸೆಯ ಬದುಕಿಗೆ ಬೆಳಕು ನೀಡೋಣ” ಎಂಬ ಧ್ಯೇಯವಾಕ್ಯದೊಂದಿಗೆ ಮೂಡುಬಿದಿರೆ 23ನೇ ವರ್ಷದ ಕೋಟಿ–ಚೆನ್ನಯ್ಯ ಜೋಡುಕರೆ ಕಂಬಳದ ಪ್ರಯುಕ್ತ ಹಮ್ಮಿಕೊಳ್ಳಲಾಗಿದೆ.
ಈ ಸೇವಾ ಯೋಜನೆಯಡಿಯಲ್ಲಿ ಮೂಡುಬಿದಿರೆ ಕೊಡಂಗಲ್ಲು ನಿವಾಸಿ ಅದ್ವಿತ್ ಡಿ. ದೇವಾಡಿಗ (9) ಅವರಿಗೆ ಮಾತನಾಡಲು ಹಾಗೂ ಕಿವಿ ಕೇಳಿಸಲು ಆಗದೆ ಇರುವ ಹಿನ್ನೆಲೆ ಇವರ ಚಿಕಿತ್ಸಾ ವೆಚ್ಚ ಸಂಗ್ರಹಿಸುವ ಉದ್ದೇಶ ಹೊಂದಲಾಗಿದೆ. ಅಲ್ಲದೆ ಮೂಡುಬಿದಿರೆ ಪುತ್ತಿಗೆ ಗ್ರಾಮದ ನಿವಾಸಿ ಅಕ್ಷತಾ ಕುಮಾರಿ (35) ಅವರು ಕಿಡ್ನಿ ವೈಫಲ್ಯ ಹಾಗೂ ಇತರ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದು, ಇವರ ಚಿಕಿತ್ಸೆಗೆ ಸಹಾಯ ಒದಗಿಸುವ ಉದ್ದೇಶವೂ ಈ ಯೋಜನೆಯಲ್ಲಿದೆ.
ಸೇವಾ ಕಾರ್ಯದ ಭಾಗವಾಗಿ ನೇತಾಜಿ ಬ್ರಿಗೇಡ್ ಸದಸ್ಯರು ವಿಶೇಷ ವೇಷಗಳನ್ನು ಧರಿಸಿ ಮೂಡುಬಿದಿರೆ ನಗರ ವ್ಯಾಪ್ತಿಯಲ್ಲಿ ಹಾಗೂ ಕೋಟಿ–ಚೆನ್ನಯ್ಯ ಜೋಡುಕರೆ ಕಂಬಳದ ಸ್ಥಳದಲ್ಲಿ ಸಾರ್ವಜನಿಕರಿಂದ ಸಹಾಯವನ್ನು ವಿನಂತಿಸಲಿದ್ದಾರೆ.
ಮಾನವೀಯತೆ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಮೈಗೂಡಿಸಿಕೊಂಡು ನಡೆಯುತ್ತಿರುವ ಈ ಸೇವಾ ಯೋಜನೆಗೆ ಸಹೃದಯಿ ಬಂಧುಗಳು ಹಾಗೂ ಕಂಬಳಾಭಿಮಾನಿಗಳು ತಮ್ಮಿಂದಾದಷ್ಟು ಸಹಕಾರ ನೀಡುವಂತೆ ನೇತಾಜಿ ಬ್ರಿಗೇಡ್ (ರಿ.) ಮೂಡುಬಿದಿರೆ ಮನವಿ ಮಾಡಿದೆ.
ದಾನಿಗಳು ಈ ಮೂಲಕ ನಿಮ್ಮ ದೇಣಿಗೆ ಮೊತ್ತವನ್ನು ಕಳುಹಿಸಬಹುದು
Name : nethaji Brigade Moodubidre
BANK : SBI State Bank Moodubidre
A/C : 40729128120
IFSC Code : SBIN0005623
PhonePe : 8884863293
ಹೆಚ್ಚಿನ ಮಾಹಿತಿಗಾಗಿ : 9964935293 , 9880774592 , 8105027427 , 82777137854 , 9902165473

