ಮುಲ್ಕಿ : ಹೆದ್ದಾರಿ ತಡೆಬೇಲಿಗೆ ಕಾರು ಡಿಕ್ಕಿ – ಇಬ್ಬರಿಗೆ ಗಾಯ

0
152

ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಕೊಕ್ಕರಕಲ್ ಬಳಿ ಬುಧವಾರ ಸಂಜೆ ಹೆದ್ದಾರಿ ತಡೆಬೇಲಿಗೆ ಕಾರು ಢಿಕ್ಕಿ ಹೊಡೆದು ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಸುರತ್ಕಲ್‌ನ ಮಾಂಡೋವಿ ಮೋಟಾರ್ ಪಕ್ಕದ ಈಡನ್ ಅಪಾರ್ಟ್‌ ಮೆಂಟ್ ನಿವಾಸಿಗಳಾದ ಅಡ್ರಿನ್ ರೀಟಾ ಮತ್ತು ಲಿಯೋನಲ್ ರೋಹನ್ ಎಂದು ಹೇಳಲಾಗಿದ್ದು, ಗಾಯಗೊಂಡು ಮುಕ್ಕ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮುಲ್ಕಿ ಕಡೆಯಿಂದ ಸುರತ್ಕಲ್‌ಗೆ ತೆರಳುತ್ತಿದ್ದ ಮಾರುತಿ ವ್ಯಾಗನರ್ ಕಾರು ಕೊಕ್ಕರಲ್ ಬಳಿ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಅಪಘಾತ ತಡೆಬೇಲಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನ ಎಡಭಾಗದ ಒಳನುಗ್ಗಿದ ಕಬ್ಬಿಣದ ತಡೆಬೇಲಿ ಸೀಟಿನವರೆಗೆ ಒಳನುಗ್ಗಿದೆ ಈ ಸಂದರ್ಭ ಕಾರಿನಲ್ಲಿದ್ದ ಅಡ್ರಿನ್ ರೀಟಾ ಕಾಲಿಗೆ ಮತ್ತು ಎಡಭಾಗದ ಹಿಂದಿನ ಸೀಟಿನಲ್ಲಿದ್ದ ಲಿಯೋನಲ್ ರೋಹನ್ ಗಾಯಗೊಂಡಿದ್ದಾರೆ.

ಅಪಘಾತದಲ್ಲಿ ಕಾರು ತೀವ್ರ ಜಖಂಗೊಂಡಿದ್ದು, ಹೆಜಮಾಡಿ ಟೋಲ್ ಪ್ಲಾಝಾ ಮತ್ತು ಸಂಚಾರಿ ಪೋಲಿಸರು ಸ್ಥಳಕ್ಕೆ ಆಗಮಿಸಿ ಕ್ರೇನ್ ಮೂಲಕ ಕಾರನ್ನು ತೆರವುಗೊಳಿಸಿದ್ದಾರೆ.

LEAVE A REPLY

Please enter your comment!
Please enter your name here