ಮೂಡುಬಿದಿರೆ: ಬಾಟಲಿ ನೀರಿನ ಬದಲಿಗೆ ಜಗ್ ಹಾಗೂ ಸ್ಟೀಲ್ ಲೋಟದಲ್ಲಿ ನೀರಿನ ವ್ಯವಸ್ಥೆ, ಮರುಬಳಕೆ ಮಾಡುವ ಬ್ಯಾನರ್, ಉಪಹಾರಕ್ಕೆ ಸ್ಟೀಲ್ ತಟ್ಟೆ -ಲೋಟ, ಚಮಚಗಳ ವ್ಯವಸ್ಥೆ. ಇದು ನಿನ್ನೆ ಮೂಡುಬಿದಿರೆ ಪ್ರೆಸ್ ಕ್ಲಬ್ನ ವತಿಯಿಂದ ಪತ್ರಿಕೆ ದಿನಾಚರಣೆ ಅಂಗವಾಗಿ ಸಮಾಜ ಮಂದಿರದಲ್ಲಿ ಏರ್ಪಡಿಸಲಾದ ಮಾಧ್ಯಮ ಹಬ್ಬ-2025 ಕಾರ್ಯಕ್ರಮವು ಶೂನ್ಯ ತ್ಯಾಜ್ಯ ಮಾದರಿ ಕ್ರಮವನ್ನು ಅನುಸರಿಸಿ ಗಮನ ಸೆಳೆಯಿತು.
ಸಮಾರಂಭದಲ್ಲಿ ಏಕ ಬಳಕೆಯ ತಟ್ಟೆ ಲೋಟಗಳ ತ್ಯಾಜ್ಯದ ಉತ್ಪತ್ತಿಯಾಗದಂತೆ ಕಾರ್ಯಕ್ರಮ ಆಯೋಜಿಸಿದ್ದು, ಮಾದರಿ ಕಾರ್ಯಕ್ರಮವಾಗಿ ರೂಪುಗೊಂಡಿರುವ ಬಗ್ಗೆ ಪ್ರಶಂಸೆ ವ್ತಕ್ತವಾಗಿದೆ.

