ಮೂಡುಬಿದಿರೆ ಮೈನ್ ಕ್ಲಸ್ಟರ್ ಪ್ರತಿಭಾ ಕಾರಂಜಿ

0
68

ವರದಿ ರಾಯಿ ರಾಜ ಕುಮಾರ
ಮೂಡುಬಿದರೆ ತಾಲೂಕಿನ ಮೂಡುಬಿದಿರೆ ಮೈನ್ ಕ್ಲಸ್ಟರ್ ನ ಪ್ರತಿಭಾ ಕಾರಂಜಿ ನವೆಂಬರ್ 19 ರಂದು ಮೂಡುಬಿದರೆ ಮೇನ್ ಶಾಲೆಯಲ್ಲಿ ಜರುಗಿತು. ಕ್ಷೇತ್ರ ಶಿಕ್ಷಣಾಧಿಕಾರಿ ವಿರುಪಾಕ್ಷಪ್ಪ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಪ್ರತಿಭಾ ಕಾರಂಜಿಯಿಂದ ವಿದ್ಯಾರ್ಥಿಗಳಿಗೆ ಮಾನಸಿಕ ಹಾಗೂ ದೈಹಿಕ ಚಟುವಟಿಕೆಗಳು ಹೆಚ್ಚು ಸಬಲಗೊಂಡು ಉತ್ತಮ ಆರೋಗ್ಯಕ್ಕೆ ದಾರಿಯಾಗುತ್ತದೆ ಎಂದು ಎಲ್ಲರಿಗೂ ಶುಭ ಹಾರೈಸಿದರು. ಕ್ಲಸ್ಟರ್ ನ ಎಲ್ಲಾ ಶಾಲೆಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು .
ಆಗಮಿಸಿದ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳನ್ನು ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶಶಿಕಲಾ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಎಲ್ಲ ರೀತಿಯ ಅಚ್ಚುಕಟ್ಟಿತನದೊಂದಿಗೆ ಶ್ರಮಿಸುತ್ತಿರುವ ಎಲ್ಲ ಶಿಕ್ಷಕರನ್ನು ತಾಲೂಕು ಪ್ರತಿಭಾ ಕಾರಂಜಿ ನೋಡಲ್ ಶಿಕ್ಷಣ ಸಂಯೋಜಕ ರಾಜೇಶ್ ಭಟ್ಅಭಿನಂದಿಸಿದರು. ಶಾಲಾ ಶಿಕ್ಷಕರಕ್ಷಕ ಸಂಫದ ಅಧ್ಯಕ್ಷ ಜಯಂತ್ ವೇದಿಕೆಯಲ್ಲಿ ಹಾಜರಿದ್ದರು. ವಿವಿಧ ಶಿಕ್ಷಕ ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಶಿಕ್ಷಕಿ ಜೋಯ್ಸ್ ಕುಮಾರಿ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು. ಫ್ಲಾವಿಯಾನಾ ಮೊರಾಸ್ ವಂದಿಸಿದರು .

LEAVE A REPLY

Please enter your comment!
Please enter your name here