Saturday, June 14, 2025
HomeUncategorizedಮೂಡುಬಿದಿರೆ ಪಡುಬಸದಿ ವಾರ್ಷಿಕ ಉತ್ಸವ

ಮೂಡುಬಿದಿರೆ ಪಡುಬಸದಿ ವಾರ್ಷಿಕ ಉತ್ಸವ


ಮೂಡುಬಿದಿರೆ: ಇಲ್ಲಿನ ಪ್ರಾಚೀನ ಬಸದಿಗಳಲ್ಲಿ ಒಂದಾದಪಡು ಬಸದಿಯ (ಭಗವಾನ್ ಅನಂತನಾಥ, ಧರ್ಮನಾಥ, ವಿªಮಲನಾಥ ಸ್ವಾಮಿ ಬಸದಿ) ವಾರ್ಷಿಕ ಉತ್ಸವ ಕಾರ್ಯಕ್ರಮ ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ನೇತೃತ್ವದಲ್ಲಿ ಗುರುವಾರ ನಡೆಯಿತು.
ಧರ್ಮ ಸಂದೇಶ ನೀಡಿದ ಭಟ್ಟಾರಕ ಸ್ವಾಮೀಜಿ, ನಮ್ಮ ಜೀವನದಲ್ಲಿ ಸಮ್ಯಕ್ ರತ್ನ ತ್ರಯ ಪಾಲಿಸಿದಲ್ಲಿ ದುಗುಡಗಳನ್ನು ದೂರ ಮಾಡಬಹುದು. ಸರ್ವಜ್ಞನಾದ ಭಗವಂತನ ಧರ್ಮೋಪದೇಶಗಳಿಂದ ಒಳಿತುಗಳು ಹೊಳೆಯುತ್ತದೆ ಎಂದು ನುಡಿದರು.
ಪುರೋಹಿತ ಅರವಿಂದ ತಂಡದವರು ಪೂಜಾ ಕಾರ್ಯಕ್ರಮ ನೆರವೇರಿಸಿದರು. ಬ್ರಹ್ಮ ದೇವರ ಆರಾಧನೆಯನ್ನು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಹಾಗೂ ಮಂಜುಳಾ ದಂಪತಿ ನೆರವೇರಿಸಿದರು. ರಾತ್ರಿ ದೇವರ ಉತ್ಸವ, 24 ಕಲಶ ಅಭಿಷೇಕ, ಸ್ಥಾನಿಯ ಮಹಿಳಾ ಸಂಘ ದವರಿಂದ ಸಾಮೂಹಿಕ ಅಷ್ಟಾ ವಿಧಾರ್ಚಾನೆ, ಕುಂಕುಮ ಅರ್ಚನೆ ಪೂಜೆ ನೆರವೇರಿತು.
ಬಸದಿಗಳ ಮೊಕ್ತೇಸರರಾದ ಪಟ್ಣ ಶೆಟ್ಟಿ ಸುದೇಶ್, ಆದರ್ಶ್ ಮೂಡುಬಿದಿರೆ, ವಕೀಲ ಬಾಹುಬಲಿ ಪ್ರಸಾದ್, ಪ್ರಮುಖರಾದ ಗುಣಪಾಲ ಹೆಗ್ಡೆ, ಶೈಲೇಂದ್ರ, ಕೊಡಿಪಾಡಿ ಅಶೋಕ್, ನಾಗವರ್ಮ ಪುತ್ತಿಗೆ, ಮಯೂರ್ ಅಧಿಕಾರಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular