ಮೂಡುಬಿದಿರೆ: ಐವತ್ತನೇ ವರ್ಷಕ್ಕೆ ಪಾದಾರ್ಪ ಣೆಗೈದಿರುವ ಮೂಡುಬಿದಿರೆಯ ನಾಗರಕಟ್ಟೆ ರಸ್ತೆಯ ಪಕ್ಕವಿರುವ ಕೌಟುಂಬಿಕ ಜವುಳಿ ಮಳಿಗೆ ಪ್ರಭಾತ್ ಸಿಲ್ಸ್ ಇದೀಗ ಮಳೆಗಾಲದ ಆರಂಭದಲ್ಲಿ ಮಾನ್ಸೂನ್ ಸ್ಪೆಷಲ್ ಆಫರ್ ಮತ್ತು ಡಿಸೆಂಟ್ ಸೇಲ್ ಪ್ರಕಟಿಸಿದೆ. ಹೊಸ ವಿನ್ಯಾಸಗಳ ಫ್ರೆಶ್ ಸ್ಟಾಕ್ ಬರಮಾಡಿಕೊಳ್ಳಲಾಗಿದ್ದು ಇಂದಿನ ಫ್ಯಾಷನ್ ಗಳಿಗೆ ಅನುಗುಣವಾಗಿ ಹೊಸದಾದ ಆಯ್ಕೆಗಳು ಲಭ್ಯವಾಗುತ್ತಿವೆ.
ವಿಶೇಷ ರಿಯಾಯಿತಿ: ಶೇ. 10ರಿಂದ ಶೇ.50ರವರೆಗೆ ವಿಶೇಷ ರಿಯಾಯಿತಿಗಳೊಂದಿಗೆ ಮನೆಮಂದಿಗೆ ಮೆಚ್ಚುಗೆಯಾಗುವ ಎಲ್ಲ ಉಡುಪುಗಳು ಇಲ್ಲಿವೆ. ನಿರ್ಮಾಪಕರಿಂದ ನೇರವಾಗಿ ಗ್ರಾಹಕರಿಗೆ ಒದಗಿಸಲಾಗುತ್ತಿದ್ದು ಮಧ್ಯವರ್ತಿ ಇಲ್ಲದ ನೈಜ ಬೆಲೆಯಲ್ಲಿ ಲಭ್ಯವಾಗುತ್ತಿವೆ.
ಸೀರೆ, ಡಿಸೈನರ್ ಡ್ರೆಸ್ಸು, ಕುಟುಂಬದ ಪ್ರತಿಯೊಬ್ಬ ರಿಗೂ ಆದರ್ಶ ಉಡುಪುಗಳು ಇಲ್ಲಿವೆ. ಪ್ರಭಾತ್ ಸಿಲ್ಸ್ ಪ್ರತಿಯೊಂದು ಕುಟುಂಬದ ಆಪ್ತ ಬಟ್ಟೆಗಳ ಗಮ್ಯಸ್ಥಾನವಾಗಿದೆ. ನೆಲ ಮಹಡಿಯಲ್ಲಿ ಮಹಿಳೆಯರ, ಮಕ್ಕಳ ಉಡುಪುಗಳು, ಮೊದಲ ಮಹಡಿಯಲ್ಲಿ ರೇಷ್ಮೆ ಸೀರೆಗಳು, ವಧುವಿನ ಉಡುಗೆ ತೊಡುಗೆ, ಲೆಹೆಂಗಾ, ಡ್ರೆಸ್ ಮೆಟೀರಿಯಲ್, ಸಲ್ವಾರ್ ಕಮೀಜ್ ಮತ್ತಿತರ ಬಟ್ಟೆಗಳು ಮತ್ತು ಎರಡನೇ ಮಹಡಿಯಲ್ಲಿ ವರನ ಸಾಂಪ್ರದಾಯಿಕ ಉಡುಗೆ ತೊಡುಗೆ, ಪುರುಷರ ಬ್ರ್ಯಾಂಡೆಡ್ ಫಾರ್ಮಲ್, ಕ್ಯಾಶ್ಯುವಲ್, ಸೂಟಿಂಗ್ ಶರ್ಟಿಂಗ್ ವಿಭಾಗಗಳಿವೆ.
ಸ್ಟಾಕ್ ಸೀಮಿತವಾಗಿದ್ದು ಈ ದಿನವೇ ಭೇಟಿ ನೀಡಿ ಆಫರ್ ಮುಗಿಯುವ ತನಕ ಕಾಯಬೇಕಿಲ್ಲ. ಜತೆಗೆ, ಗ್ರಾಹಕರಿಗಾಗಿ ಸೌಲಭ್ಯಯುತ ಪಾರ್ಕಿಂಗ್ ವ್ಯವಸ್ಥೆ ಇದೆ ಎಂದು ಮಾಲಕರು ತಿಳಿಸಿದ್ದಾರೆ.