ಅಹಿಂಸ ಅನಿಮಲ್ ಕೇರ್ ಗೆ ಬೇಟಿ ನೀಡಿ ಕಳ್ಳತನ ನಡೆದ ಬಗ್ಗೆ ವಿಚಾರಿಸಿ ಕಾನೂನಾತ್ಮಕ ಹೋರಾಟಕ್ಕೆ ಸಹಕಾರ ನೀಡುವ ಬಗ್ಗೆ ಚರ್ಚಿಸಲಾಯಿತು. ಮತ್ತು ಕಾರ್ಕಳ ದಲ್ಲಿ ಎಲ್ಲಾ ಕಡೆ ಗೋ ಕಳ್ಳರು ವ್ಯವಸ್ಥಿತವಾಗಿ ಕಳ್ಳತನ ನಡೆಸುತ್ತಿದ್ದಾರೆ ಇದನ್ನ ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಗೋಕಳ್ಳರನ್ನ ಮಟ್ಟಹಾಕಬೇಕು. ಇಲ್ಲವಾದಲ್ಲಿ ಕಾರ್ಕಳ ತಾಲೂಕಿನಾದ್ಯಂತ ಗೋ ಕಳ್ಳರನ್ನು ಮಟ್ಟ ಹಾಕಲು ಬಜರಂಗದಳ ತಂಡ ರಚಿಸಿ ನೇರ ಕಾರ್ಯಾಚರಣೆ ಗೆ ಇಳಿಯಲಿದೆ ಎನ್ನುವ ಎಚ್ಚರಿಕೆಯನ್ನು ನೀಡುತ್ತೇವೆ. ಭೇಟಿ ಸಂಧರ್ಭ ವಿಶ್ವಹಿಂದು ಪರಿಷದ್ ನ ಪ್ರಾಂತ ಗೋ ರಕ್ಷಾ ಪ್ರಮುಖ್ ಸುನಿಲ್ ಕೆಆರ್, ವಿಶ್ವಹಿಂದು ಪರಿಷದ್ ನ ಜಿಲ್ಲಾ ಸಹ ಕಾರ್ಯದರ್ಶಿ ಸುಧೀರ್ ನಿಟ್ಟೆ, ಪ್ರಖಂಡ ಕಾರ್ಯದರ್ಶಿ ಪ್ರಸಾದ್ ನಿಟ್ಟೆ, ಪ್ರಖಂಡ ಸಹ ಸಂಯೋಜಕ್ ರಾಘವೇಂದ್ರ ನಲ್ಲೂರು ಹಾಗು ಕಾರ್ಯಕರ್ತರು ಉಪಸ್ಥಿತಿ ಇದ್ದರು.

