ಮೂಡುಬಿದಿರೆ : ನಿವೃತ್ತ ಸರ್ಕಾರಿ ನೌಕರರ ಸಂಘದ ಸಭೆ

0
70

ವರದಿ ರಾಯಿ ರಾಜ ಕುಮಾರ

ಮೂಡುಬಿದಿರೆ ತಾಲೂಕಿನ ನಿವೃತ್ತ ಸರ್ಕಾರಿ ನೌಕರರ ಸಂಘದ ಸಭೆ ಜನವರಿ 17ರಂದು ಸಮಾಜ ಮಂದಿರದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕ ಟಿಎಎನ್ ಖಂಡಿಗೆ ಆಗಮಿಸಿದ್ದರು.

ಸದಭಿರುಚಯ ಕಾರ್ಯಕ್ರಮಗಳನ್ನು ನಿವೃತ್ತರು ಅಳವಡಿಸಿಕೊಂಡರೆ ಬದುಕಿಗೆ ಉತ್ತಮ. ತಿಂಗಳಲ್ಲಿ ಒಮ್ಮೆಯಾದರೂ ಒಬ್ಬರ ಮನೆಯಲ್ಲಿ ಸೇರಿ ಸಂತೋಷವನ್ನು ಹಂಚಿಕೊಳ್ಳುವ ಕಾರ್ಯಕ್ರಮವನ್ನು ಮಾಡಿಕೊಂಡರೆ ಉತ್ತಮ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಟಿ ಎನ್ ಕೆಂಬಾರೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಲ್‌ಜೆ ಫೆರ್ನಾಂಡಿಸ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.


.

LEAVE A REPLY

Please enter your comment!
Please enter your name here