ಮೂಡಬಿದಿರೆ ರೋಟರಿ ಕ್ಲಬ್‌:  ಸಾಧಕರಿಗೆ ಸನ್ಮಾನ

0
125

 ಮೂಡಬಿದಿರೆ: ರೋಟರಿ ಕ್ಲಬ್‌ ಮೂಡಬಿದಿರೆ ಮಿಡ್‌‌ಟೌನ್ ಇದರ ಕೊನೆಯ ಕಾರ್ಯಕ್ರಮವು ಮೂಡುಬಿದಿರೆಯ ರೋಟರಿ ಕ್ಲಬ್‌ ಸಭಾಭವನದಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ 2024-25ನೇ ಸಾಲಿನ ರೋಟರಿ ಸಾಧನೆಗಾಗಿ ಮೂಡುಬಿದಿರೆ ಯುವವಾಹಿನಿ ಅಧ್ಯಕ್ಷ, ಸಮಾಜಸೇವಕ ಹಾಗೂ ಸುಹಾನ್‌ ಫ್ಲೊರಿಂಗ್‌ ಇದರ ಮಾಲಕರಾದ ಸುಶಾಂತ್‌ ಕರ್ಕೇರ ದಂಪತಿ ಮತ್ತು ಕುಮಾರ್‌ ಪೂಜಾರಿ ದಂಪತಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕ್ಲಬ್‌ ನ ಎಲ್ಲಾ ಪದಾಧಿಕಾರಿಗಳು, ಸದಸ್ಯರನ್ನು ಅಭಿನಂದಿಸಿದರು. ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌ 3181 ಇದರ ಅಸಿಸ್ಟೆಂಟ್‌ ಗವರ್ನರ್‌ ಶರತ್‌ ಶೆಟ್ಟಿ, ಜೋನಾಲ್‌ ಲೆಪ್ಟಿನೆಂಟ್‌, ಪ್ರಶಾಂತ್‌ ಭಂಡಾರಿ ಹಾಗೂ ಬಜಪೆ, ಕಿನ್ನಿಗೋಳಿ, ಮುಲ್ಕಿ  ಕ್ಲಬ್‌ ನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ವರದಿ: ಜಗದೀಶ್‌ ಪೂಜಾರಿ ಕಡಂದಲೆ

LEAVE A REPLY

Please enter your comment!
Please enter your name here