ವೇಣೂರು: ವೇಣೂರು ಮಹಿಳಾ ಮಂಡಲ (ರಿ.) ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇಲ್ಲಿಯ ಮಹಿಳಾ ಮಂಡಲದ ಸಭಾಭವನದಲ್ಲಿ ಜರಗಿತು.
ನೂತನ ಅಧ್ಯಕ್ಷರಾಗಿ ಅಮಿತಾ ಶೇಖರ್, ಉಪಾಧ್ಯಕ್ಷರಾಗಿ ಸಂಧ್ಯಾ ಸದಾನಂದ ಹಾಗೂ ಕಾರ್ಯದರ್ಶಿಯಾಗಿ ಮಮತಾ ಗಿರೀಶ್ ಆಯ್ಕೆಯಾಗಿದ್ದಾರೆ. ಜೊತೆ ಕಾರ್ಯದರ್ಶಿಯಾಗಿ ಸುರಭಿ ಮಹಾಬಲೇಶ್, ಕೋಶಾಧಿಕಾರಿಯಾಗಿ ಕುಮುದಾ ಕಾರಂತ್ ಹಾಗೂ ಮಾತೃ ಮಂಡಳಿ ಅಧ್ಯಕ್ಷೆಯಾಗಿ ಪದ್ಮಾ ಹರೀಶ್ ಆಯ್ಕೆಯಾಗಿರುತ್ತಾರೆ.