ಜಿ ಎಸ್ ಬಿ ವಿದ್ಯಾರ್ಥಿ ವೇತನ ವಿತರಣೆ ಮೂಡುಬಿದಿರೆ ಇಲ್ಲಿನ ಶ್ರೀ ವೆಂಕಟರಮಣ ದೇವಸ್ಥಾನದ ಕೆರೆ ದೀಪೋತ್ಸವದ ಸಂದರ್ಭದಲ್ಲಿ ಜಿ ಎಸ್ ಬಿ ವಿದ್ಯಾರ್ಥಿ ವೇತನ ಮತ್ತು ಸಮಾಜ ಸೇವಾ ನಿಧಿಯಿಂದ ಸುಮಾರು 27 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ನಡೆಸಲಾಯಿತು. ವಿದ್ಯಾರ್ಥಿ ವೇತನದ ಪ್ರಾಯೋಜಕತ್ವವನ್ನು ಕಲ್ಸಂಕ ದಿವಂಗತ ವಿಟ್ಟಪ್ಪ ಪ್ರಭು ಮತ್ತು ಲಲಿತಾ ಪ್ರಭು ಅವರ ಮಕ್ಕಳು ಪ್ರಾಯೋಜಿಸಿದ್ದು ವಿನಾಯಕ ಪ್ರಭು, ಅನಂತ ಪ್ರಭು ಮತ್ತು ವಿಜಯ ಕುಡ್ವ ವಿತರಿಸಿದರು ಪ್ರಸನ್ನ ಶೆಣೈ ಸ್ವಾಗತಿಸಿ ಸೀಮಾ ಹೆಗಡೆ ವಿದ್ಯಾರ್ಥಿಗಳ ವಿವರ ರಾಘವೇಂದ್ರ ಕಾಮತ್ ದಾನಿಗಳ ವಿವರ ನೀಡಿದರು ಸಮಿತಿಯ ಸದಸ್ಯ ಆಕಾಶ್ ದೀಪ್ ಉಪಸ್ಥಿತರಿದ್ದರು.

