ವಿಶ್ವಕರ್ಮರ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ : ಸುಜ್ಞಾನಮೂರ್ತಿ.
ಹೆಬ್ರಿ : ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ಕಾಂಗ್ರೆಸ್ ಹಲವಾರು ಯೋಜನೆಗಳನ್ನು ನೀಡುತ್ತ ಬಂದಿದೆ. ಅಭಿವೃದ್ಧಿ ನಿಗಮದ ಮೂಲಕ ಹಲವಾರು ಯೋಜನೆ, ಸವಲತ್ತುಗಳನ್ನು ನೀಡುತ್ತಿದೆ. ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು, ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರವನ್ನು ವಿಶ್ವಕರ್ಮರು ಬೆಂಬಲಿಸಬೇಕು ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ. ಪಿ ಹೇಳಿದರು.
ಅವರು ಬುಧವಾರ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಬೇಟಿ ನೀಡಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ. ಪಿ ಅವರನ್ನು ಗೌರವಿಸಲಾಯಿತು. ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿಯಾಲು ಗೋಪಿನಾಥ ಭಟ್, ಕಾರ್ಯದರ್ಶಿ ಎಚ್.ಜನಾರ್ಧನ್, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅದ್ಯಕ್ಷ ಶಂಕರ ಶೇರಿಗಾರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯತೀಶ್ ಕರ್ಕೆರ, ಜಿಲ್ಲಾ ಇಂಟಕ್ ಅಧ್ಯಕ್ಷ ಮುರುಳಿ ಶೆಟ್ಟಿ, ಹೆಬ್ರಿಯ ಮುಖಂಡ ಹೆಚ್.ಬಿ.ಸುರೇಶ್, ಚಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಶೆಟ್ಟಿ ಹುತ್ತುರ್ಕೆ,ಹೆಬ್ರಿ ಕಾಂಗ್ರೆಸ್ ಅಧ್ಯಕ್ಷ ಸಂದೀಪ ಆಚಾರ್ಯ, ಪ್ರಮುಖರಾದ ದಯಾನಂದ ಶೆಟ್ಟಿ, ಕನ್ಯಾನ ಸಂತೋಷ ನಾಯಕ್, ರಾಘವೇಂದ್ರ ನಾಯ್ಕ್ ಇಂದಿರಾನಗರ, ರಾಜೇಶ ಆಚಾರ್ಯ ಮಠದಬೆಟ್ಟು, ಸೀತಾನದಿ ಚಂದ್ರಶೇಖರ ಶೆಟ್ಟಿ, ನಿಲೇಶ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

