ಮೂಡುಬಿದಿರೆ : ಸಂತ ಇಗ್ನೇಶಿಯಸ್ ಆಂಗ್ಲ ಮಾಧ್ಯಮ ಶಾಲೆ ಪಾಲಡ್ಕ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ 100% ಫಲಿತಾಂಶ ಬಂದಿದ್ದು, ಸತತ ಎಂಟು ವರ್ಷಗಳಿಂದ ಈ ಸಾಧನೆಯನ್ನು ಮಾಡಿರುತ್ತದೆ.
41 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 22 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ ಹಾಗೂ 19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಈ ಸಾಧನೆಗೆ ಪಾತ್ರರಾದ ಎಲ್ಲಾ ಶಿಕ್ಷಕರನ್ನು, ಹೆತ್ತವರನ್ನು ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸುವ ಜೊತೆಗೆ, ಇದರ ಹಿಂದೆ ಶ್ರಮಿಸಿದ ಸರ್ವರಿಗೂ ಮನದಾಳದ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

