ಮೂಡುಬಿದಿರೆ : ಟೈರ್ ಸ್ಫೋಟ – ನಿಯಂತ್ರಣ ತಪ್ಪಿ ಕಾರು ಪಲ್ಟಿ

0
20

ಮೂಡುಬಿದಿರೆ : ಪುರಸಭೆ ವ್ಯಾಪ್ತಿಯ ಕೀರ್ತಿ ನಗರದಲ್ಲಿ ಬುಧವಾರ ಮಧ್ಯಾಹ್ನ ಕಾರಿನ ಟೈರ್ ಸ್ಫೋಟಗೊಂಡು , ಕಾರು ಪಲ್ಟಿಯಾದ ಘಟನೆ ಸಂಭವಿಸಿದೆ.

ತೀರ್ಥಹಳ್ಳಿ ಮೂಲದ ಚಾಲಕ ಕಾರು ಚಲಾಯಿಸುತ್ತಿದ್ದ ಸಮಯದಲ್ಲಿ ಏಕಾಏಕಿ ಟೈರ್ ಸ್ಫೋಟಗೊಂಡು , ನಿಯಂತ್ರಣ ಕಳೆದುಕೊಂಡ ವಾಹನ, ರಸ್ತೆ ಬದಿಗೆ ಮಗುಚಿ’ ಬಿದ್ದಿದ್ದು ಅಪಘಾತದಲ್ಲಿ ಚಾಲಕನಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿ ಚಾಲಕನನ್ನು ಸುರಕ್ಷಿತವಾಗಿ ಹೊರತೆಗೆದಿದ್ದು. ಘಟನಾ ಸ್ಥಳಕ್ಕೆ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here