ಮೂಡುಬಿದಿರೆ: ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ (ರಿ.) ಮೂಡುಬಿದಿರೆ, ಶ್ರೀ ನಾರಾಯಣಗುರು ಸೇವಾದಳ ಮತ್ತು ಶ್ರೀ ನಾರಾಯಣಗುರು ಮಹಿಳಾ ಘಟಕದ ವತಿಯಿಂದ ಅಮೃತ ಮಹೋತ್ಸವ ಸಂಭ್ರಮ- 2025 ಇದರ ಅಂಗವಾಗಿ ಬಿರುವೆರ್ ಕೂಡುಕಟ್ಟ್ ಕಾರ್ಯಕ್ರಮವು ಜೂ. 29ರಂದು ಮೂಡುಬಿದಿರೆಯ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ಜರಗಲಿದೆ.
ಬೆಳಿಗ್ಗೆ ಗಂಟೆ 10 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ‍್ಯಕ್ಷರಾದ ನ್ಯಾಯವಾದಿ ಸುರೇಶ್ ಕೆ. ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಅಮೃತ ಮಹೋತ್ಸವ ಸಮಿತಿ ಪ್ರಧಾನ ಸಂಚಾಲಕ ರಘು ಸಿ. ಪೂಜಾರಿ ಮಾರ್ನಾಡ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ವೀರಪ್ಪ ಕೋಟ್ಯಾನ್ ಗಡಿಕಾರರು, ಈಶ್ವರ ಪೂಜಾರಿ ಮಿತ್ತಲಾಡಿ ಬರ್ಕೆ, ರವೀಂದ್ರ ಪೂಜಾರಿ ಕಲ್ಯಾಣಿ ಬರ್ಕೆ, ಧರ್ಣಪ್ಪ ಕೋಟ್ಯಾನ್ ಜೋಟಿಂಜಗುತ್ತು, ಪ್ರದೀಪ್ ಶಾಂತಿ ಕಾಶಿಪಟ್ಣ, ಸುರೇಶ್ ಕೋಟ್ಯಾನ್, ರಂಜಿತ್ ಪೂಜಾರಿ ಹಾಗೂ ಸಾವಿತ್ರಿ ಕೇಶವ ಭಾಗವಹಿಸಲಿದ್ದಾರೆ.