ಮೂಡುಬಿದಿರೆ ಮೊಸರು ಕುಡಿಕೆ ಉತ್ಸವ : ಭರ್ಜರಿ ಸಿದ್ಧತೆ, ಜು.16ರಂದು ಆಮಂತ್ರಣ ಪತ್ರಿಕೆ ಬಿಡುಗಡೆ

0
65

ಮೂಡುಬಿದಿರೆ : ಶ್ರೀ ಗೋಪಾಲಕೃಷ್ಣ ದೇವಸ್ಥಾನದ 110ನೇ ವರ್ಷದ ಐತಿಹಾಸಿಕ ಮೊಸರು ಕುಡಿಕೆ ಉತ್ಸವದ ಅಂಗವಾಗಿ ಜವನೆರ್ ಬೆದ್ರ ಫೌಂಡೇಶನ್ (ರಿ.) ವತಿಯಿಂದ ಜುಲೈ 16ರಂದು (ಗುರುವಾರ) ಬೆಳಿಗ್ಗೆ 10.15 ಗಂಟೆಗೆ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಉತ್ಸವದ ಆಹ್ವಾನ ಪತ್ರಿಕೆಯನ್ನು ಗಣ್ಯರ ಸಮ್ಮುಖದಲ್ಲಿ ಅನಾವರಣಗೊಳಿಸಲಾಗುವುದು.

ಈ ಬಾರಿಯ ಮೊಸರು ಕುಡಿಕೆ ಉತ್ಸವವು ಸೆಪ್ಟೆಂಬರ್ 5, 2026ರಂದು ಮೂಡುಬಿದಿರೆಯ ವೇಣೂರು ಕೃಷ್ಣಯ್ಯ ವೇದಿಕೆ, ಕೆ. ಅಮರನಾಥ ಶೆಟ್ಟಿ ವೃತ್ತದ ಸಮೀಪ ಅದ್ಧೂರಿಯಾಗಿ ನಡೆಯಲಿದ್ದು, ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಉತ್ಸವದ ಪ್ರಮುಖ ಆಕರ್ಷಣೆಯಾಗಲಿವೆ.

ಕಾರ್ಯಕ್ರಮದಲ್ಲಿ ಭಕ್ತರು, ಸಾರ್ವಜನಿಕರು, ಸಮಾಜದ ಮುಖಂಡರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜವನೆರ್ ಬೆದ್ರ ಫೌಂಡೇಶನ್ (ರಿ.)ಯ ಸಂಸ್ಥಾಪಕರು, ಸಂಚಾಲಕರು, ಸಂಯೋಜಕರು, ಸರ್ವ ಸದಸ್ಯರು ಹಾಗೂ ಜವನೆರ್ ಬೆದ್ರ ಅಬ್ಬಕ್ಕ ಬ್ರಿಗೇಡ್ (ಮಹಿಳಾ ಘಟಕ) ವತಿಯಿಂದ ಮನವಿ ಮಾಡಲಾಗಿದೆ.