ಇನ್ನಂಜೆಯಲ್ಲಿ ಸೆ.5ರಂದು ಮೊಸರು ಕುಡಿಕೆ ಕ್ರೀಡಾಕೂಟ–2026

0
11

ಇನ್ನಂಜೆ : ಇನ್ನಂಜೆ ಯುವಕ ಮಂಡಲ (ರಿ.) ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಇನ್ನಂಜೆ ಒಕ್ಕೂಟ, ಇನ್ನಂಜೆ ಗ್ರಾಮ ಪಂಚಾಯತ್, ಇನ್ನಂಜೆ ಯುವತಿ ಮಂಡಲ (ರಿ.), ರೋಟರಿ ಸಮುದಾಯ ದಳ ಇನ್ನಂಜೆ, ಬಿಲ್ಲವ ಸೇವಾ ಸಂಘ ಇನ್ನಂಜೆ ಹಾಗೂ ನಿಸರ್ಗ ಫ್ರೆಂಡ್ಸ್ (ರಿ.) ಪಾದಕೆರೆ ಇವರ ಸಹಕಾರದೊಂದಿಗೆ ಶ್ರೀಕೃಷ್ಣ ಲೀಲೋತ್ಸವದ ಅಂಗವಾಗಿ ಮೊಸರು ಕುಡಿಕೆ ಕ್ರೀಡಾಕೂಟ–2026 ಸೆಪ್ಟೆಂಬರ್ 5ರಂದು ಇನ್ನಂಜೆಯಲ್ಲಿ ನಡೆಯಲಿದೆ.

ದಾಸಭವನ, ಇನ್ನಂಜೆಯಲ್ಲಿ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಬೆಳಗ್ಗಿನಿಂದಲೇ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಹಗ್ಗಜಗ್ಗಾಟ ಮತ್ತು ಮಡಕೆ ಒಡೆಯುವ ಸ್ಪರ್ಧೆಗಳು ಮಧ್ಯಾಹ್ನದ ಬಳಿಕ ನಡೆಯಲಿವೆ.

ಕಾರ್ಯಕ್ರಮದ ಅಂಗವಾಗಿ ಮುದ್ದು ಕೃಷ್ಣ ವೇಷ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ಚಿತ್ರಕಲಾ ಸ್ಪರ್ಧೆಗೆ ಆಯೋಜಕರ ವತಿಯಿಂದ ಪೇಪರ್ ನೀಡಲಾಗುವುದು. ಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆಯೂ ನಡೆಯಲಿದೆ.

ಉಚಿತ ನೇತ್ರ ತಪಾಸಣಾ ಶಿಬಿರ

ಸೆಪ್ಟೆಂಬರ್ 5ರಂದು ಬೆಳಗ್ಗೆ 9.30ರಿಂದ ಯುವಕ ಮಂಡಲ ಸಭಾಭವನದಲ್ಲಿ ಶ್ರೀಹರಿ ನೇತ್ರಾಲಯ, ಉಡುಪಿ ಇಲ್ಲಿನ ತಜ್ಞ ವೈದ್ಯಾಧಿಕಾರಿಗಳಿಂದ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ.

ಕ್ರೀಡಾ ಸ್ಪರ್ಧೆಯ ನಿಯಮಗಳು

ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಇನ್ನಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. ಸ್ಪರ್ಧೆಗಳಿಗೆ ಸಂಬಂಧಿಸಿದಂತೆ ಸಂಘಟಕರ ತೀರ್ಮಾನವೇ ಅಂತಿಮವಾಗಿದ್ದು, ಯಾವುದೇ ಚರ್ಚೆಗೆ ಆಸ್ಪದ ಇರುವುದಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.

ಎಲ್ಲಾ ಸ್ಪರ್ಧೆಗಳು ಬೆಳಗ್ಗಿನಿಂದ ನಡೆಯಲಿದ್ದು, ಹಗ್ಗಜಗ್ಗಾಟ ಮತ್ತು ಮಡಕೆ ಒಡೆಯುವ ಸ್ಪರ್ಧೆಗಳು ಮಧ್ಯಾಹ್ನದ ನಂತರ ನಡೆಯಲಿವೆ. ಸ್ಪರ್ಧಾಳುಗಳು ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳುವಂತೆ ಕೋರಲಾಗಿದೆ.

ಸರ್ವರಿಗೂ ಆದರದ ಸ್ವಾಗತ ಎಂದು ಇನ್ನಂಜೆ ಯುವಕ ಮಂಡಲದ ಪದಾಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9980252910 ಸಂಪರ್ಕಿಸಬಹುದು.