ಮಕ್ಕಳ ಜಗಳ ಬಿಡಿಸಲು ಹೋದ ತಾಯಿ ದುರಂತ ಸಾವು, ಜನ್ಮ ಕೊಟ್ಟವಳಿಗೆ ಇರಿದು ಕೊಂದ ಮಗ

0
86

ಹುಬ್ಬಳ್ಳಿ, ಮೇ 30: ಮಕ್ಕಳ ಜಗಳ ಬಿಡಿಸಲು ಬಂದಿದ್ದ ತಾಯಿಯನ್ನು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ (H ತಾಲೂಕಿನ ತೊರವಿ ಹಕ್ಕಲ ಗ್ರಾಮದಲ್ಲಿ ನಡೆದಿದೆ. ಪದ್ಮಾ ಚಲೂರಿ (46) ಮೃತ ದುರ್ದೈವಿ. ಮಂಜುನಾಥ ಕೊಲೆ ಮಾಡಿದ ಆರೋಪಿ. ಸಹೋದರರಾದ ಮಂಜುನಾಥ್ ಮತ್ತು ಲಕ್ಷ್ಮಣ ಕಟಿಂಗ್ ಶಾಪ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಹೇರ್​ ಕಟಿಂಗ್ ಮಾಡಿದ ಹಣ ಹಂಚಿಕೆ ವಿಚಾರದಲ್ಲಿ ಮಂಜುನಾಥ್​ ಮತ್ತು ಲಕ್ಷ್ಮಣ ಜಗಳವಾಡುತ್ತಿದ್ದರು.

ಜಗಳ ಬಿಡಿಸಲು ಬಂದ ತಾಯಿ ಪದ್ಮಾ ಅವರ ಹೊಟ್ಟೆಗೆ ಪುತ್ರ ಮಂಜುನಾಥ ಕಿಟಕಿಯ ಗಾಜಿನಿಂದ ಇರಿದಿದ್ದಾನೆ. ಗಾಯಾಳು ಪದ್ಮಾರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಪದ್ಮಾ ನರಳಾಡಿ ಜೀವಬಿಟ್ಟ ಬಿಟ್ಟಿದ್ದಾರೆ. ಇನ್ನು, ಆರೋಪಿ ಮಂಜುನಾಥ ಮತ್ತು ಲಕ್ಷ್ಮಣನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here