ಫಾರ್ಮ್ ​ಹೌಸ್​ನಲ್ಲಿ ಮಗಳ ಎದುರೇ ತಾಯಿ ಮೇಲೆ ಅತ್ಯಾಚಾರ

0
852

ದೆಹಲಿ : ಫಾರ್ಮ್​ಹೌಸ್​ನಲ್ಲಿ ಮಗಳ ಎದುರೇ ತಾಯಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ದೆಹಲಿಯ ಸ್ವರೂಪ್​ ನಗರದಲ್ಲಿ ನಡೆದಿದೆ. ಫಾರ್ಮ್​ಹೌಸ್​ನ ಮೇಲ್ವಿಚಾರಕಿ ಮೇಲೆ ಪಕ್ಕದ ಮನೆಯವನು ಅತ್ಯಾಚಾರವೆಸಗಿದ್ದಾನೆ. ಬಿಹಾರದ ಮುಜಫರ್‌ಪುರ ಮೂಲದ 35 ವರ್ಷದ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆ ಬುಧವಾರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಆರೋಪಿ ಧರ್ಮಿಂದರ್ ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆಸುವ ಮೊದಲು ತಾಯಿ ಮತ್ತು ಮಗಳ ಇಬ್ಬರ ಕೈಕಾಲುಗಳನ್ನು ಕಟ್ಟಿಹಾಕಿದ್ದ.

ಕಾದಿಪುರದ ತೋಟದ ಮನೆಯ ವರಾಂಡಾದಲ್ಲಿ ತಾನು ಮತ್ತು ತನ್ನ 11 ವರ್ಷದ ಮಗಳು ಮಲಗಿದ್ದಾಗ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಮಹಿಳೆ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಅವರು ಕೂಡ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಏಪ್ರಿಲ್ 20 ಮತ್ತು 21 ರ ಮಧ್ಯರಾತ್ರಿ 2 ರಿಂದ 2.30 ರ ಸುಮಾರಿಗೆ, ಅದೇ ಪ್ರದೇಶದಲ್ಲಿ ವಾಸಿಸುವ ಆರೋಪಿ, ಮುಖಕ್ಕೆ ಬಟ್ಟೆ ಕಟ್ಟಿಕೊಂಡು ತೋಟದ ಮನೆಯ ಗೋಡೆಯನ್ನು ಹತ್ತಿ, ಮಹಿಳೆ ಆಕೆಯ ಮಗಳ ಜತೆ ಮಲಗಿದ್ದಾಗ ಕೈಕಾಲುಗಳನ್ನು ಕಟ್ಟಿ, ಬೆದರಿಸಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ದಿನಗೂಲಿ ಕಾರ್ಮಿಕ ಧರ್ಮಿಂದರ್ ಹಲ್ಲೆಯ ನಂತರ ತೋಟದ ಮನೆಯ ಗೋಡೆ ಹಾರಿ ಪರಾರಿಯಾಗಿದ್ದಾನೆ. ಆರೋಪಿಯ ವಿರುದ್ಧ ಅತ್ಯಾಚಾರ ಮತ್ತು ಮನೆ ಅತಿಕ್ರಮಣ ಸೇರಿದಂತೆ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here