ದುಬೈಯ ನೆಲದಲ್ಲಿ ಅನೇಕ ಧಾರ್ಮಿಕ, ಸಾಂಸ್ಕೃತಿಕ,ಸಾಮಾಜಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ಬಿಲ್ಲವಾಸ್ ಫ್ಯಾಮಿಲಿ ದುಬೈಯ 2026-2028 ನೇ ಸಾಲಿನ ಪದಗ್ರಹಣ ಸಮಾರಂಭವು ದುಬೈಯ ಪ್ರತಿಷ್ಟಿತ ಹೋಟೆಲೊಂದರಲ್ಲಿ 11-07-2026ನೇ ಶನಿವಾರದಂದು ಸರಳ ರೀತಿಯಲ್ಲಿ ಸಂಪನ್ನಗೊಂಡಿತು. ಸಂಘದ ಗೌರವ ಸಲಹೆಗಾರ ರಾದ ಶ್ರೀ ಜಿತೇಂದ್ರ ಸುವರ್ಣ, ಶ್ರೀ ಮೋಹನ್ ಅತ್ತಾವರ, ಶ್ರೀ ಸತೀಶ್ ಪೂಜಾರಿ, ಶ್ರೀ ಮಾಧವ ಪೂಜಾರಿ, ಶ್ರೀ ಪ್ರಕಾಶ್ ಪೂಜಾರಿ,ಶ್ರೀ ಪ್ರಭಾಕರ ಸುವರ್ಣ, ಶ್ರೀ ಕೃಷ್ಣ ಪೂಜಾರಿ, ಯವರು ನೂತನವಾಗಿ ಆಯ್ಕೆಯಾದ ಸಮಿತಿಯ ಪಧಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಯೆಂದು ಶುಭಹಾರೈದರು. 2026-2028 ಸಾಲಿನ ಪದಾಧಿಕಾರಿಗಳು ಅಧ್ಯಕ್ಷರಾಗಿ ಶ್ರೀ ದೀಪಕ್ ಎಸ್ . ಪಿ. ಉಪಾಧ್ಯಕ್ಷರುಗಳಾಗಿ ಪ್ರೇಮ್ ಕೋಟ್ಯಾನ್, ಜಗನ್ನಾಥ್ ಬೆಳ್ಳಾರೆ,
ಪ್ರಧಾನ ಕಾರ್ಯದರ್ಶಿಯಾಗಿ ರವಿ ಕೋಟ್ಯಾನ್, ಉಪ ಕಾರ್ಯದರ್ಶಿಯಾಗಿ ಯತೀರಾಜ್ ಕೋಟ್ಯಾನ್ ಖಜಾಂಚಿಯಾಗಿ ಪ್ರಭಾಕರ್ ಪೂಜಾರಿ, ಲೆಕ್ಕ ಪರಿಶೋಧಕರಾಗಿ ಪ್ರಭಾಕರ್ ಸುವರ್ಣ ಕರ್ನಿರೆ, ಕ್ರೀಡಾ ಕಾರ್ಯದರ್ಶಿಯಾಗಿ ಅಶೋಕ್ ಪೂಜಾರಿ ಮುಳಿಯ, ಉಪ ಕ್ರೀಡಾ ಕಾರ್ಯದರ್ಶಿಗಳಾಗಿ ರೋಷನ್ ಕೋಟ್ಯಾನ್, ಅಶೋಕ್ ತೋನ್ಸೆ, ಜ್ಯೋತಿ ದೀಪಕ್, ಶ್ಯಾಮಲ ಪೂಜಾರಿ, ಹಿತೇಶ್ ಸುವರ್ಣ, ಚರಣ್ ಪೂಜಾರಿ, ರೂಪೇಶ್ ಪೂಜಾರಿ, ವರ್ಷ ಅಶ್ವಿನ್ ಪೂಜಾರಿ . ಮನೋರಂಜನ ಕಾರ್ಯದರ್ಶಿಗಳಾಗಿ ಸ್ಮಿತಾ ಅಶೋಕ್, ಶುಭ ಮನೋಜ್. ಮನೋರಂಜನ ಉಪ ಕಾರ್ಯದರ್ಶಿಗಳಾಗಿ ಪ್ರವೀಣ್ ಕರ್ಕೇರ, ಮೋನಪ್ಪ ಪೂಜಾರಿ, ಮಾಧವ್ ಪೂಜಾರಿ, ಯತಿರಾಜ್ ಕೋಟ್ಯಾನ್, ಜಗನ್ನಾಥ್ ಬೆಳ್ಳಾರೆ, ಮೋಹನ್ ಪೂಜಾರಿ, ಶ್ರುತಿ ಚಂದ್ರು ಪೂಜಾರಿ. ಸಾಂಸ್ಕೃತಿಕ ಕಾರ್ಯದರ್ಶಿ ಸತೀಶ್ ಉಳ್ಳಾಲ್, ಕೃಷ್ಣ ಪೂಜಾರಿ, ಮನೋಜ್ ಬೋಳಾರ್
ಉಪ ಸಾಂಸ್ಕೃತಿಕ ಕಾರ್ಯದರ್ಶಿಗಳು ,ರಘು ಜತ್ತನ್, ಶಿವ ಪೂಜಾರಿ, ವೇಣುಗೋಪಾಲ್ ಕೋಟ್ಯಾನ್ , ರಿತೇಶ್ ಅಂಚನ್, ದೀಪ ಜಗನ್ನಾಥ್,ಸುವರ್ಣ ಸತೀಶ್, ಅಶ್ವಿನಿ ಅಶೋಕ್, ಅಮೃತ ಪ್ರಭಾಕರ್.
ಡಿಜಿಟಲ್ ತಂಡದ ಕಾರ್ಯದರ್ಶಿಯಾಗಿ ಚಂದ್ರು ಪೂಜಾರಿ, ಜೊತೆಕಾರ್ಯದರ್ಶಿಯಾಗಿ ಅಶ್ವಿನ್ ಪೂಜಾರಿ, ಮಾಧ್ಯಮ ಸಲಹೆಗಾರರು ರಮೇಶ್ ಸುವರ್ಣ . ಗೌರವ ಸಲಹೆಗಾರರು ಜಿತೇಂದ್ರ ಸುವರ್ಣ, ಮೋಹನ್ ಅತ್ತವರ, ಸತೀಶ್ ಪೂಜಾರಿ, ಮಾಧವ್ ಪೂಜಾರಿ, ಪ್ರಕಾಶ್ ಪೂಜಾರಿ, ಪ್ರಭಾಕರ್ ಸುವರ್ಣ, ಕೃಷ್ಣ ಪೂಜಾರಿ.ದೇವದಾಸ್ ಸುವರ್ಣ. 2ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ದೀಪಕ್ ಎಸ್ ಪಿ ಯವರು ಮಾತನಾಡಿ ಕಳೆದ 2 ವರ್ಷ ಪದಾಧಿಕಾರಿಗಳು ನೀಡಿದ ಸಹಕಾರವನ್ನು ನೆನಪಿಸುತ್ತಾ ಇನ್ನು ಮುಂದೆಯೂ ಹಿರಿಯರಿಂದ ಕಿರಿಯರವರೆಗೆ ಎಲ್ಲರೂ ಸಂಘಟನೆಯ ಬೆನ್ನೆಲುಬಾಗಿ ನಿಂತು ಸಂಘವನ್ನು ಮುನ್ನಡಿಸಿದರೆ ಇನ್ನು ಹೆಚ್ಚಿನ ಸಾಧನೆಯನ್ನು ಮಾಡಲು ಸಹಕರಿಯಾಗಬಹುದು ಎನ್ನುತ್ತಾ ಎಲ್ಲಾ ಸದಸ್ಯರ ಸಹಕಾರವನ್ನು ಬಯಸಿದರು. ಕಾರ್ಯದರ್ಶಿ ರವಿ ಕೋಟ್ಯಾನ್ರವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ರಿತೇಶ್ ಅಂಚನ್ ಕುಲಶೇಖರ ಧನ್ಯವಾದ ಸಮರ್ಪಣೆಯನ್ನು ಮಾಡಿದರು. ಬಿಲ್ಲವ ಫ್ಯಾಮಿಲಿ ದುಬೈಯ ನಿಕಟ ಪೂರ್ವ ಅಧ್ಯಕ್ಷರುಗಳು, ಪಧಾಧಿಕಾರಿಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು.
Home ಅಂತಾರಾಷ್ಟ್ರೀಯ ಬಿಲ್ಲವಾಸ್ ಫ್ಯಾಮಿಲಿ ದುಬೈಯ 2026-2028ನೇ ಸಾಲಿನ ಅಧ್ಯಕ್ಷರಾಗಿ 2ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದ ಶ್ರೀ ದೀಪಕ್...

