ಮುಂಡಿತ್ತಡ್ಕ ಸಮೀಪದ ಮುಗು ಸೇವಾ ಸಹಕಾರಿ ಬ್ಯಾಂಕಿನ ಕೇಂದ್ರ ಕಚೇರಿಯ ಕಾಂಪೌಂಡ್ ಕುಸಿದಿದ್ದು ಇದೀಗ ಬ್ಯಾಂಕ್ ಕಚೇರಿಯ ಕಟ್ಟಡ ಆತಂಕದಲ್ಲಿದೆ. ಇಲ್ಲಿನ ಲೋಕೋಪಯೋಗಿ ಇಲಾಖೆಯ ರಸ್ತೆ ರಿಪೇರಿ ಸಂದರ್ಭ ಚರಂಡಿ ವ್ಯವಸ್ಥೆಯ ಅಸಮರ್ಪಕತೆಯೇ ಈ ಮಳೆಗೆ ಗೋಡೆ ಕುಸಿಯಲು ಕಾರಣ ಎನ್ನಲಾಗುತ್ತದೆ. ಇದೀಗ ಕುಸಿದು ರಸ್ತೆಗೆ ಬಿದ್ದ ಕಂಪೌಂಡಿನ ಕಲ್ಲು ಮಣ್ಣುಗಳನ್ನು ತೆರವುಗೊಳಿಸಲಾಗುತ್ತಿದ್ದು ಭಾರೀ ನಾಶ ನಷ್ಟ ಸಂಭವಿಸಿದೆ ಎಂದು ಬ್ಯಾಂಕ್ ಅಧಿಕೃತರು ತಿಳಿಸಿದ್ದಾರೆ.