Saturday, June 14, 2025
Homeಬೆಳ್ತಂಗಡಿರಾಜೀವ್ ಬಿ.ಎಚ್‌. ನಿರ್ದೇಶನದ “ತಾಕತ್” ಕಿರುಚಿತ್ರಕ್ಕೆ ಮುಹೂರ್ತ

ರಾಜೀವ್ ಬಿ.ಎಚ್‌. ನಿರ್ದೇಶನದ “ತಾಕತ್” ಕಿರುಚಿತ್ರಕ್ಕೆ ಮುಹೂರ್ತ

ಬೆಳ್ತಂಗಡಿ: ಜಿ.ಕೆ. ಮೂವೀಸ್ ನಿರ್ಮಾಣದ ತಾಕತ್ ಕಿರುಚಿತ್ರ ಮುಹೂರ್ತ ಸಮಾರಂಭ ಹಾಗೂ ಚಿತ್ರೀಕರಣ ಇತ್ತೀಚಿಗೆ ಬೆಳ್ತಂಗಡಿಯಲ್ಲಿ ಜರಗಿತು. ಹಲವರು ಚಲನಚಿತ್ರ ಧಾರಾವಾಹಿಗಳಲ್ಲಿ ಅಭಿನಯಿಸಿ ಅನುಭವ ಹೊಂದಿರುವ ಜಾದು ಹಾಗೂ ರಂಗಭೂಮಿ ಕಲಾವಿದ ಬೆಳ್ತಂಗಡಿಯ ರಾಜೀವ್ ಬಿ.ಎಚ್ ರವರು ಚಿತ್ರಕಥೆ ಬರೆದು ತಾಕತ್ ಎಂಬ ಕಿರುಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ಡ್ರಗ್ಸ್ ಹಾಗೂ ಇನ್ನಿತರ ಕೆಟ್ಟ ಚಟಗಳಿಗೆ ಬಲಿ ಬೀಳುವ ಯುವಕರ ಕಥೆ ಹೊಂದಿರುವ ಈ ಚಿತ್ರವು ಬಹಳಷ್ಟು ಕುತೂಹಲ ಉಳ್ಳ ಸಸ್ಪೆನ್ಸ್ ಚಿತ್ರವಾಗಿದ್ದು ಈಗಾಗಲೇ ಚಿತ್ರೀಕರಣ ಬರದಿಂದ ಸಾಗಿದೆ.

ಹಲವಾರು ಕನ್ನಡ ಚಲನಚಿತ್ರ ಹಾಗೂ ಧಾರಾವಾಹಿಗಳನ್ನು ನಿರ್ಮಿಸಿ ನಿರ್ದೇಶನ ಮಾಡಿ ಪ್ರಶಸ್ತಿಗಳನ್ನು ಪಡೆದಿರುವ ಕೃಷ್ಣ ಬೆಳ್ತಂಗಡಿ ಹಾಗೂ ಕಲಾವಿದ ಶಿವಪ್ಪ ಬಿರ್ವ ಇವರ ನಿರ್ಮಾಣದಲ್ಲಿ ಈ ಚಿತ್ರವು ಚಿತ್ರೀಕರಣಗೊಂಡಿರುತ್ತದೆ.

ಉದ್ಯಮಿ ಚಂದನ್ ಕಾಮತ್ ಮತ್ತು ಉಮೇಶ್ ಪ್ರಭು ಧರ್ಮಸ್ಥಳರವರ ಸಂಪೂರ್ಣ ಸಹಕಾರದೊಂದಿಗೆ ಒಂದನೇ ಹಂತದ ಚಿತ್ರಕರಣ ಮುಕ್ತಾಯಗೊಂಡಿದೆ. ರಾಜೀವ್ ಬಿ.ಎಚ್ ರವರ ಪುತ್ರ ಪ್ರಣಿತ್ ರಾಜ್, ಮನೋಜ್ ಸವಣಾಲು, ಸಾವನ್ ಬಿರ್ವ ಬೆಳ್ತಂಗಡಿ ಛಾಯಾಗ್ರಹಣ ಮಾಡುತ್ತಿರುವ ಈ ಚಿತ್ರದಲ್ಲಿ ಪ್ರಣಿತ್ ರಾಜ್, ಶಿವಪ್ಪ ಬಿರ್ವ, ಉಮೇಶ್ ಪ್ರಭು ಧರ್ಮಸ್ಥಳ, ಪ್ರಕಾಶ್‌ ಸವಣಾಲು, ಸುಮಂತ್, ಸಾವನ್ ಬಿರ್ವ, ಚಿದಾನಂದ ಸುಧೆ ಮುಗೇರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ.

ನಿವೃತ್ತ ಕಂದಾಯ ನಿರೀಕ್ಷಕ ಎಚ್. ಪದ್ಮ ಕುಮಾರ್ ಚಿತ್ರದ ಮುಹೂರ್ತವನ್ನು ನೆರವೇರಿಸಿ ಎಲ್ಲಾ ಕಲಾವಿದರಿಗೆ ಶುಭ ಹಾರೈಸಿದರು. ಉಪನ್ಯಾಸಕ ಹಾಗೂ ರಂಗನಿರ್ದೇಶಕ ಶೀನಾ ನಾಡೋಳಿ, ನಿರ್ದೇಶಕ ನಿರ್ಮಾಪಕ ಕೃಷ್ಣ ಬೆಳ್ತಂಗಡಿ ಕಲಾವಿದ ಹಾಗೂ ನಿರ್ದೇಶಕ ಮನೋಜ್ ಸವಣಲು, ಸಹ ನಿರ್ಮಾಪಕ ಹಾಗೂ ಕಲಾವಿದ ಶಿವಪ್ಪ ಬಿರ್ವಾ, ಕೆಮರಾ ಮ್ಯಾನ್ ಹಾಗೂ ಚಿತ್ರದ ನಾಯಕ ನಟ ಪ್ರಣಿತ್ ರಾಜ್, ಉದ್ಯಮಿ ಮತ್ತು ಕಲಾವಿದ ಉಮೇಶ್ ಪ್ರಭು ಧರ್ಮಸ್ಥಳ, ಪ್ರಕಾಶ್ ಬೆಳ್ತಂಗಡಿ, ಸಂಜೀವ ಬಿ.ಹೆಚ್‌, ಉಷಾ ಸಂಜಯನಗರ, ಪೂರ್ಣಿಮಾ, ಚಿದಾನಂದ ಸುದೆಮುಗೆರು ಉಪಸ್ಥಿತರಿದ್ದರು. ನಿರ್ದೇಶಕ ರಾಜೀವ್ ಬಿ.ಎಚ್ ಸ್ವಾಗತಿಸಿ, ವಂದಿಸಿದರು.

RELATED ARTICLES
- Advertisment -
Google search engine

Most Popular