ಮುಲ್ಕಿ : ಶಿಮಂತೂರು-ಪಡಂಗ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ವಿಜೃಂಭಣೆಯ ನೇಮೋತ್ಸವ

0
34

ಮುಲ್ಕಿ:ಶಿಮಂತೂರಿನ ಬಾವದ ಮಣ್ಣು ಪಡಂಗದ ಕೊಟ್ಯ (ಗುಡಿ) ದಲ್ಲಿ ನೆಲೆಯಾಗಿರುವವರು ಎಂಬ ಮನ್ನಣೆಯನ್ನು ಪಡೆದಿರುವ ಧರ್ಮದೈವ ಶ್ರೀ ಬಬ್ಬು ಸ್ವಾಮಿ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವವು
ಶನಿವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.

ಶನಿವಾರ ಮಧ್ಯಾಹ್ನ ಚಪ್ಪರ ಏರುವುದು ,ಸಂಜೆ6ಗಂಟೆಗೆ ಭಂಡಾರ ಇಳಿಯುವುದು ರಾತ್ರಿ ಗಂಟೆ 8ಕ್ಕೆ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಗಂಟೆ 9ರಿಂದ ಗಗ್ಗರ ಸೇವೆ, ದೈವರಾಜ ಕೋರ್ದಬ್ಬು ತನ್ನಿಮಾನಿಗ ನೇಮೋತ್ಸವ,ಹಾಗೂ ಧೂಮಾವತಿ ಬಂಟ ದೈವಗಳ ನೇಮೋತ್ಸವ ವೈಭವದಿಂದ ನಡೆಯಿತು .

ಈ ಸಂದರ್ಭ ಶಿಮಂತೂರು ದೇವಸ್ಥಾನದ ಆಡಳಿತ ಮೊಕ್ತೇಸರ ಉದಯಕುಮಾರ್ ಶೆಟ್ಟಿ,ಮಾಜೀ ಮೊಕ್ತೇಸರ ಚಂದ್ರಹಾಸ ಎನ್ ಶೆಟ್ಟಿ, ಶಿವರಾಮ ಶೆಟ್ಟಿ ಅಜೆಕಾರು, ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಶಂಕರ್ ಶೆಟ್ಟಿ,ಕಾರ್ಯದರ್ಶಿ ನಾಗರಾಜ ಶೆಟ್ಟಿ,ಕೋಶಾಧಿಕಾರಿ ಜಯಕರ ಶೆಟ್ಟಿ , ಭಾಸ್ಕರ್ ಶೆಟ್ಟಿ ನಡುಗಿತ್ತು,ಬಾಲಕೃಷ್ಣ ಶೆಟ್ಟಿ, ಶಂಕರ್ ಮಾಸ್ಟರ್, ಮೋಹನ ಕೋಟ್ಯಾನ್, ವಿಶ್ವನಾಥ ಶೆಟ್ಟಿ, ತೇಜರಾಜ ಶೆಟ್ಟಿ ಮಜಲಗುತ್ತು, ಕಿರಣ್ ಕುಮಾರ್ ಶೆಟ್ಟಿ ಕಟ್ಟಪುಣಿ , ಸಂಜಿತ್ ಶೆಟ್ಟಿ ಶಿಮಂತೂರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here