ಮೂಲ್ಕಿ: ಮುಲ್ಕಿಯ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಅಂಗವಾಗಿ ಬ್ರಹ್ಮರಥೋತ್ಸವ ವೇಳೆ ದೇವರ ತೇರು ಮುರಿದು ಬಿದ್ದಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಶನಿವಾರ ಬೆಳಗ್ಗಿನ ಜಾವ ಸುಮಾರು 1.40 ರಿಂದ 2 ಗಂಟೆ ವೇಳೆ ಬ್ರಹ್ಮರಥೋತ್ಸವ ತೇರಿನ ಮೇಲ್ಬಾಗ ಕುಸಿದು ಬಿದ್ದಿದೆ.
ಈ ಸಂದರ್ಭದಲ್ಲಿ ಹಲವಾರು ಮಂದಿ ಅರ್ಚಕರು ರಥದಲ್ಲಿಯೇ ಕುಳಿತಿದ್ದರು. ಕೆಳಗಡೆ ಸಾವಿರಾರು ಭಕ್ತಾಧಿಗಳು ರಥ ಎಳೆಯುವುದರಲ್ಲಿ ತಲ್ಲೀನರಾಗಿದ್ದರು. ಏಕಾ ಏಕಿ ರಥವನ್ನು ನಿಗ್ರಹಿಸುವ ದಂಡ ತುಂಡಾದ ಪರಿಣಾಮ ರಥದ ಮೇಲ್ಬಾಗ ಸಂಪೂರ್ಣ ಧರೆಗೆ ಉರುಳಿದೆ. ಓರ್ವ ಅರ್ಚಕರಿಗೆ ಸಣ್ಣಪುಟ್ಟ ತರಚಿದ ಗಾಯವಾಗಿದ್ದು, ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ ಎಂಬ ಮಾಹಿತಿ ಲಭಿಸಿದೆ.
ಈ ಘಟನೆಯು ಭಕ್ತ ಸಮೂಹದಲ್ಲಿ ಭಾರೀ ಆತಂಕಕ್ಕೆ ಕಾರಣವಾಯಿತು. ಬಳಿಕ ದೇವರ ಉತ್ಸವವನ್ನು ಚಂದ್ರ ಮಂಡಲ ರಥದಲ್ಲಿ ಮುಂದುವರಿಸಲಾಯಿತು.