ಮುಲ್ಕಿ: ನಗರ ಪಂಚಾಯತ್ ನ ಆಡಳಿತದ ಕಾರ್ಯಾಚರಣೆಯಲ್ಲಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೆಕ್ಸ್ ಅಳವಡಿಕೆ ಹಾಗೂ -ಪ್ಲಾಸ್ಟಿಕ್ ತ್ಯಾಜ್ಯ ಬಿಸಾಡುವವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಲಾಯಿತು.
ನಗರ ಪಂಚಾಯತ್ ಮುಖ್ಯಾಧಿಕಾರಿ ಮಧುಕರ್ ಹಾಗೂ ಆರೋಗ್ಯಾಧಿಕಾರಿ ಶಶಿರೇಖಾ ನೇತೃತ್ವದಲ್ಲಿ
ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಿದ ಬ್ಯಾನರ್ ಗಳನ್ನು ನಗರ ಪಂಚಾಯತ್ ಸಿಬ್ಬಂದಿ ಗಳಿಂದ ತೆರವುಗೊಳಿಸಿದರು ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಸುಡುವವರ ವಿರುದ್ಧ ದಂಡ ವಿಧಿಸಿದರು ಹಾಗೂ ಕಾರ್ನಾಡ್ ಮಾರುಕಟ್ಟೆಯಲ್ಲಿರುವ ಕೋಳಿ ಅಂಗಡಿಯ ಪಕ್ಕ ಕಸದ ರಾಶಿ ಹಾಕಿ ಸುಡುವವರ ವಿರುದ್ಧವು ಕೂಡ ದಂಡವನ್ನು ವಿಧಿಸಿದರು ಬಳಿಕ ಉಪ ನೊಂದಣಿ ಅಧಿಕಾರಿಗಳ ಕಚೇರಿಯ ಆವರಣದಲ್ಲಿ ಬಿಸಾಡಿದ ತ್ಯಾಜ್ಯವನ್ನು ಸ್ವಚ್ಛಗೊಳಿಸಬೇಕೆಂದು ಉಪನೋಂದಣಿಧಿಕಾರಿಗಳಿಗೆ ಖುದ್ದಾಗಿ ಭೇಟಿ ನೀಡಿ ತಿಳಿಸಿದರು
ಬಳಿಕ ಮುಖ್ಯಾಧಿಕಾರಿ ಮಾಧ್ಯಮದ ಜೊತೆ ಮಾತನಾಡಿ ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯಿತಿ ಅನುಮತಿ ಇಲ್ಲದೆ ಯಾವುದೇ ಪ್ಲೆಕ್ಸ್, ಬ್ಯಾನರ್ ಗಳನ್ನು ಹಾಕಿದ್ದಲ್ಲಿ ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲಾಗುವುದೆಂದು ಎಚ್ಚರಿಕೆ ನೀಡಿದರು.