ಮುಲ್ಕಿ:ಪ್ರಥಮ ಬಾರಿಗೆ ಕರಾವಳಿಯ ದೇವಸ್ಥಾನದ ಬ್ರಹ್ಮರಥ ಡಿಜಿಟಲ್ 3ಡಿ ಮಾಡೆಲ್ ಮತ್ತು ಅನಿಮಷನ್

0
818

ಮುಲ್ಕಿ:ತುಳುನಾಡಿನ ಪರಂಪರೆಯನ್ನು ಡಿಜಿಟಲ್ ಜಗತ್ತಿಗೆ ಪರಿಚಯಿಸುವ ದೃಷ್ಟಿಯಿಂದ ಬಪ್ಪನಾಡು ದೇವಸ್ಥಾನದ ಬ್ರಹ್ಮರಥದ 3ಡಿ ಮಾಡೆಲ್ ಮಾಡಿ, ಬ್ರಹ್ಮರಥ ನಿರ್ಮಾಣದ ಅನಿಮಷನನ್ನು ಜ್ಞಾನಶಕ್ತಿ ಡಿಜಿಟಲ್ಸ್ ಎಂಬುವ ಸಂಸ್ಥೆಯು ಮಾಡಿದೆ.
ಹಳೆಯಂಗಡಿಯ ಸರಕಾರಿ ಕಾಲೇಜಿನ ಪ್ರಥಮ ಎಂ ಕಾಂ ವಿಭಾಗದಲ್ಲಿ ವ್ಯಾಸಂಗ ನಡೆಸುತ್ತಿರುವಸಂಸ್ಥೆಯ ಅಭಿರಾಮ್ ರವರು ಸತತವಾಗಿ ಸುಮಾರು ಒಂದು ವರ್ಷ ರಥದ ವಿನ್ಯಾಸದ ಬಗ್ಗೆ ಅಭ್ಯಾಸ ಮಾಡಿ, 3 ತಿಂಗಳ ಅವಧಿಯಲ್ಲಿ ಮಾಡೆಲನ್ನು ಪೂರ್ಣಗೋಳಿಸಿದ್ದಾರೆ.
ರಥದ ಜಿಡ್ಡೆ ಹಾಗೂ ರಥಕ್ಕೆ ಬಳಸುವ ಎಲ್ಲಾ ಪರಿಕರದ 3ಡಿ ಮಾಡೆಲ್ ಪ್ರತ್ಯೇಕವಾಗಿ ತಯಾರಿಸಿ, ರಥ ಜೋಡಿಸುವ ರೀತಿಯಲ್ಲಿಯೇ ಅನಿಮಷನ್ ಮಾಡಿದ್ದಾರೆ. ಮಾತ್ರವಲ್ಲದೆ ಬಪ್ಪನಾಡು ದೇವರ ಅಟ್ಟೆ ಇರುವ ಬಲಿ ಮೂರ್ತಿಯನ್ನು ರಚಿಸಿದ್ದಾರೆ.
ಈ 3ಡಿ ಮಾಡೆಲ್ ಗಳನ್ನು ತಯಾರಿಸುವಲ್ಲಿ ಸಹಕರಿಸದ ಎಲ್ಲಾ ದೇವಸ್ಥಾನದ ಅರ್ಚಕ ವರ್ಗ, ಆಡಳಿತ ಮಂಡಳಿಯ ಸದಸ್ಯರು, ಅರ್ಚಕ ವರ್ಗ, ಸಿಬ್ಬಂದಿಗಳ ಸಹಾಯವನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ.
ನಮ್ಮ ಹಿಂದೂ ಮತ್ತು ತುಳುನಾಡಿನ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶ ಹೊಂದಿರುವ ಸಂಸ್ಥೆಯು ಕಳೆದ ಗಣೇಶ ಚೌತಿಯ ಸಂದರ್ಭದಲ್ಲಿ ಚತುರ್ಭುಜ ಗಣಪತಿ ದೇವರ 3ಡಿ ಮಾಡೆಲ್ ಹಾಗು ಅನಿಮಷನ್ ಮಾಡಿದೆ.
ಮುಂದಿನ ಪ್ರಾಜೆಕ್ಟ್ ಕರಾವಳಿಯ ದೇವಸ್ಥಾನ ಹಾಗೂ ಗುತ್ತಿನ ಮನೆಯ ಅನಿಮಷನ್ ಕೊನೆಯ ಹಂತದಲ್ಲಿದೆ. ಮುಂದಿನ ವರ್ಷದಲ್ಲಿ ಮುಂಡ್ಕೂರು ದೇವಸ್ಥಾನದ ಬ್ರಹ್ಮರಥದ 3ಡಿ ಮಾಡೆಲ್ ಪೂರ್ಣಗೊಳಿಸುವ ಯೋಜನೆಯನ್ನು ಕೈಗೊಂಡಿದ್ದು ಪೌರಾಣಿಕ ಹಾಗೂ ಜಾನಪದೀಯ ವ್ಯಕ್ತಿಗಳ ಮತ್ತು ವಸ್ತುಗಳ ಮಾಡೆಲ್ ರಚನೆ ಮಾಡುವ ಉದ್ದೇಶವನ್ನು ಸಂಸ್ಥೆಯು ಹೊಂದಿದೆ ಎಂದು ಅವರು ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here