ಮುಲ್ಕಿ: ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ಹೈಫೈ “ನಂದಿನಿ ಕುಟೀರ” ಗೋಶಾಲೆ ಉದ್ಘಾಟನೆ

0
347

ಮುಲ್ಕಿ: ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ಹೈಫೈ “ನಂದಿನಿ ಕುಟೀರ” ಗೋಶಾಲೆ ಉದ್ಘಾಟನಾ ಸಮಾರಂಭ ಬುಧವಾರ ನಡೆಯಿತು.
ವೇದಮೂರ್ತಿ ಸುಬ್ರಹ್ಮಣ್ಯ ಭಟ್ ಗಣಪತಿ ಭಟ್ ಚೇಳಾಯರುಇವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಅಂತರಾಷ್ಟ್ರೀಯ ವಾಸ್ತು ತಜ್ಞ ಶ್ರೀಶ್ರೀ ಚಂದ್ರಶೇಖರ ಸ್ವಾಮೀಜಿ ರವರು ಗೋ ಶಾಲೆಯನ್ನು ಉದ್ಘಾಟಿಸಿ ಮಾತನಾಡಿ ಗೋಸಂಪತ್ತು ದೇವರ ಸಮಾನ ಹಾಗೂ ರಾಷ್ಟ್ರೀಯ ಸಂಪತ್ತಾಗಿದ್ದು ಗೋವು ಸಂತತಿ ಉಳಿಸಲು ಸಮಸ್ತ ನಾಗರಿಕರು ಕೈ ಜೋಡಿಸಬೇಕಾಗಿದೆ ಎಂದರು
ಅವರು ಮಾತನಾಡಿ ಹೈಫೈ ಗೋಶಾಲೆಯಲ್ಲಿ ಸೊಳ್ಳೆ ನಿವಾರಣೆಗೆ ಮೆಶ್ ಅಳವಡಿಕೆ, ನಾಲ್ಕು ವಿದ್ಯುತ್ ಚಾಲಿತ ಫ್ಯಾನ್ , ಸ್ವಚ್ಛತೆಗೆ ವಿಶೇಷ ಪ್ರಾಮುಖ್ಯತೆ ಒದಗಿಸಲಾಗಿದೆ ಎಂದರು
ಈ ಸಂದರ್ಭದಲ್ಲಿ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮನ ನಿರ್ದೇಶಕಿ ರಜನಿ ಸಿ ಭಟ್, ರಾಹುಲ್ ಚಂದ್ರಶೇಖರ್,
ಜ್ಯೋತಿಷಿ ವಿಶ್ವನಾಥ ಭಟ್, ಉಷಾ ವಿಶ್ವನಾಥ ಭಟ್, ರಾಜೇಶ್ ಭಟ್, ವೀಣಾ ರಾಜೇಶ್ ಭಟ್, ಡಾ. ಐಶ್ವರ್ಯ ಭಟ್, ಪ್ರಜ್ವಲ್ ಭಟ್, ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ಸಂಚಾಲಕರಾದ ಪುನೀತ್ ಕೃಷ್ಣ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here