Saturday, June 14, 2025
HomeUncategorizedಸನಾತನ ರಾಷ್ಟ್ರ ಶಂಖನಾದ ಮಹೋತ್ಸವ'ಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಆಹ್ವಾನ

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಆಹ್ವಾನ

ಹೆಚ್ಚು ಹೆಚ್ಚು ಹಿಂದೂಗಳನ್ನು ಸಂಘಟಿಸಿ ! – ಯೋಗಿ ಆದಿತ್ಯನಾಥ್, ಮುಖ್ಯಮಂತ್ರಿಗಳು, ಉತ್ತರ ಪ್ರದೇಶ

ಲಕ್ನೋ – ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಲಾಜಿ ಆಠವಲೆ ಅವರ 83 ನೇ ಜನ್ಮೋತ್ಸವ ಮತ್ತು ಸನಾತನ ಸಂಸ್ಥೆಯ ರಜತ ಮಹೋತ್ಸವ ವರ್ಷದ ಸಂದರ್ಭದಲ್ಲಿ, 2025 ರ ಮೇ 17 ರಿಂದ 19 ರವರೆಗೆ ಗೋವಾದಲ್ಲಿ ನಡೆಯಲಿರುವ ಭವ್ಯವಾದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ‘ಗೋರಕ್ಷಪೀಠ ಪೀಠಾಧೀಶ್ವರ’ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ. ಯೋಗಿ ಆದಿತ್ಯನಾಥ್ ಮಹಾರಾಜ್ ಅವರಿಗೆ ಆಮಂತ್ರಿಸಲಾಯಿತು. ಈ ಸಂದರ್ಭದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ‘ಸ್ವಾಗತ ಸಮಿತಿ’ಯಿಂದ ಸದ್ಗುರು (ಡಾ.) ಚಾರುದತ್ತ ಪಿಂಗಳೆ, ಮಡಿಯಾಹು ವಿಧಾನಸಭಾ ಕ್ಷೇತ್ರದ ಜೌನಪುರದ ಶಾಸಕ ಶ್ರೀ. ರವೀಂದ್ರ ಕುಮಾರ್ ಪಟೇಲ್ ಮತ್ತು ಶ್ರೀ. ವಿಶ್ವನಾಥ ಕುಲಕರ್ಣಿ ಇವರು ಉತ್ತರ ಪ್ರದೇಶದ ಲಕ್ನೋದಲ್ಲಿರುವ ಮುಖ್ಯಮಂತ್ರಿ ಕಚೇರಿಯಲ್ಲಿ ಯೋಗಿಯವರನ್ನು ಭೇಟಿಯಾದರು.

ಕಳೆದ 25 ವರ್ಷಗಳಲ್ಲಿ ಸನಾತನ ಸಂಸ್ಥೆಯ ಕಾರ್ಯದ ಬಗ್ಗೆ ಮುಖ್ಯಮಂತ್ರಿಯವರಿಗೆ ತಿಳಿಸಲಾಯಿತು. ಸನಾತನ ಸಂಸ್ಥೆಯ ಕಾರ್ಯದ ಬಗ್ಗೆ ಕೇಳಿದ ನಂತರ ಅವರು ಸನಾತನ ಸಂಸ್ಥೆಯ ಉತ್ತಮ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು. ಈ ಕಾರ್ಯಕ್ಕೆ ಅಭಿನಂದನೆಗಳು ! ಪ್ರಸ್ತುತ, ಹಿಂದೂಗಳನ್ನು ವಿಭಜಿಸಲು ದೊಡ್ಡ ಪ್ರಮಾಣದ ಪ್ರಯತ್ನಗಳು ನಡೆಯುತ್ತಿವೆ. ಹೆಚ್ಚು ಹೆಚ್ಚು ಹಿಂದೂಗಳನ್ನು ಸಂಘಟಿಸುವುದು ಅಗತ್ಯ. ಇಂತಹ ಕಾರ್ಯಕ್ರಮಗಳ ಮೂಲಕ ಹೆಚ್ಚು ಹೆಚ್ಚು ಹಿಂದೂಗಳನ್ನು ಸಂಘಟಿಸುವಂತೆ ಅವರು ಆಶೀರ್ವದಿಸಿದರು.

ಕೊನೆಗೆ, 'ಸನಾತನ ಸಂಸ್ಥೆ' ನಿರ್ಮಿಸಿದ ಸಾತ್ತ್ವಿಕ ಚಿತ್ರವಿರುವ ಶ್ರೀರಾಮನ ಭವ್ಯ ಪ್ರತಿಮೆ, ಹಾಗೂ ಹಿಂದೂ ಜನಜಾಗೃತಿ ಸಮಿತಿ ನಿರ್ಮಿಸಿದ 'ಹಿಂದೂ ರಾಷ್ಟ್ರ ಏಕೆ ಬೇಕು ?', 'ಹಿಂದೂ ರಾಷ್ಟ್ರ ಸ್ಥಾಪನೆಯ ದಿಶೆ', 'ಹಿಂದೂ ರಾಷ್ಟ್ರ - ಆಕ್ಷೇಪ ಮತ್ತು ಖಂಡನೆ' ಮತ್ತು 'ಹಲಾಲ್ ಜಿಹಾದ್' ಎಂಬ ಹಿಂದಿ ಭಾಷಾ ಗ್ರಂಥಗಳನ್ನು ಮುಖ್ಯಮಂತ್ರಿ ಅವರಿಗೆ ಉಡುಗೊರೆಯೆಂದು ನೀಡಲಾಯಿತು.
RELATED ARTICLES
- Advertisment -
Google search engine

Most Popular