ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್, ಮಂಗಳೂರು ಎಸ್ ಸಿ ಎಸ್ ಪ್ರಥಮ ದರ್ಜೆ ಕಾಲೇಜು, ಯೂತ್ ರೆಡ್ ಕ್ರಾಸ್ ಯೂನಿಟ್, ವೆನ್ಲಾಕ್ ಆಸ್ಪತ್ರೆ ಸಹಯೋಗದೊಂದಿಗೆ ಬ್ರಹತ್ ರಕ್ತದಾನ ಶಿಬಿರ ಮಂಗಳೂರಿನ ಎಸ್ ಸಿ ಎಸ್ ರಿವರ್ ಸೈಡ್ ಕ್ಯಾಂಪಸ್ ನಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು 57 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು ಕಾರ್ಯಕ್ರಮವನ್ನು ಡಾಕ್ಟರ್ ಪ್ರಥಮ್ ಉದ್ಘಾಟಿಸಿ ರಕ್ತದಾನದ ಮಹತ್ವದ ಬಗ್ಗೆ ತಿಳಿ ಹೇಳಿದರು ಮುಖ್ಯ ಅತಿಥಿಗಳಾಗಿ ಆಗಮಿಸಿದ ವೆಂಕಟೇಶ ಹೆಬ್ಬಾರ್ ರಕ್ತದಾನದ ಮಹತ್ವ ಹಾಗೂ ಯುವ ಜನತೆ ವಿಶೇಷವಾಗಿ ರಕ್ತದಾನಕ್ಕೆ ಮುಂದೆ ಬಂದು ತೀರ ಬಡವರಿಗೆ ಸಹಾಯಕವಾಗುವ ಸರಕಾರಿ ಆಸ್ಪತ್ರೆಗಳಲ್ಲಿ ಒಂದಾದ ವೆನ್ಲಕ್ ಆಸ್ಪತ್ರೆ ಈಗಾಗಲೇ ಲಕ್ಷಾಂತರ ಬಡವರ ಜೀವ ಉಳಿಸಿದೆ ಇಂಥಹ ಸರಕಾರಿ ಆಸ್ಪತ್ರೆಗಲೊಂದಿಗೆ ರಕ್ತದಾನ ಶಿಬಿರಗಳನ್ನು ಮಾಡಿ ತನ್ಮೂಲಕ ವಿಶೇಷವಾಗಿ ಬಡವರ್ಗದ ಸೇವೆಯಲ್ಲಿ ಪಾಲುದಾರರಾಗುವುದು ಅಭಿನಂದನಿಯ ಎಂದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಅಧಿಕಾರಿ ಕಲೀದ್ ವಹಿಸಿದರು ವೇದಿಕೆಯಲ್ಲಿ ಪ್ರಾಂಶುಪಾಲರಾದ ಬಾಲಕೃಷ್ಣ ಭಾರಧ್ವಜ್, ಅಂತೋನಿ ,ಚರಣ್ ,ಮಾನಿಶ್, ಪ್ರತಿಭಾ ಹೆಬ್ಬಾರ್ ಅಶ್ವಿನಿ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.