ಮುಲ್ಕಿ: ವಿದ್ಯಾರ್ಥಿ ಮುಂದಿನ ಜೀವನದಲ್ಲಿ ಚುನಾವಣೆಯ ಮಹತ್ವದ ಅರಿವು ಶಾಲಾ ಸಂಸತ್ತಿನ ಮೂಲಕ ದೊರೆಯುತ್ತದೆ ಎಂದು ಮುಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ವಿನೋದ್ ರಾಮಚಂದ್ರ ನಾಯಕ್ ಹೇಳಿದರು
ಅವರು ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಘದ ಉದ್ಘಾಟನೆಯನ್ನು ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ, ಕಾಲೇಜಿನಲ್ಲಿ ದೊರೆಯುವ ಸೌಲಭ್ಯಗಳು ಹಾಗೂ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಸಾಧಕರಾಗಿ ಎಂದರು. ಕಾಲೇಜು ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ವೇದಿಕೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ರೇಖಾ ಬಿ.ಎಸ್ ವಿದ್ಯಾರ್ಥಿ ನಾಯಕ ಮೋಹಿತ್, ಕಾರ್ಯದರ್ಶಿ ಮತ್ತಿತರರು ಉಪಸ್ಥಿತರಿದ್ದರು. ಸೋಹೈಭ ಮಾರಿಯಮ್ಮ ಧನ್ಯವಾದ ಅರ್ಪಿಸಿದರು, ವಿದ್ಯಾರ್ಥಿ ಪೂಜಾ ನಿರೂಪಿಸಿದರು.