ಅ. 8 ರಂದು ಸಿನಿಮಾಸಿರಿಯಿಂದ ಗಾನಕೋಗಿಲೆ ಎಸ್. ಜಾನಕಿಯವರಿಗೆ ಸಂಗೀತ ನಮನ

0
3

ದಾವಣಗೆರೆ : ಚಲನಚಿತ್ರ ಅಭಿಮಾನಿಗಳ ಕ್ರಿಯಾತ್ಮಕ ಸಂಸ್ಥೆ “ಸಿನಿಮಾ ಸಿರಿ”ಯಿಂದ ಇತ್ತೀಚಿಗೆ ಸ್ವರ್ಗಸ್ಥರಾದ ಸ್ವರ ಸಾಮ್ರಾಜ್ಯದ ಗಾನಕೋಗಿಲೆ ಎಸ್. ಜಾನಕಿಯವರಿಗೆ ಆಗಸ್ಟ್ 8 ರಂದು ಶನಿವಾರ ಸಂಜೆ 6 ಗಂಟೆಗೆ ದಾವಣಗೆರೆಯ ಗುಂಡಿ ವೃತ್ತದಲ್ಲಿ ಇರುವ ಗುಂಡಿ ಮಹದೇವಪ್ಪ ಛತ್ರದ ಸಭಾಂಗಣದಲ್ಲಿ ಶ್ರದ್ಧಾಂಜಲಿಯೊAದಿಗೆ ಸಂಗೀತ ನಮನ ಹಮ್ಮಿಕೊಳ್ಳಲಾಗಿದೆ ಎಂದು ಸಿನಿಮಾಸಿರಿಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

ದಾವಣಗೆರೆಯ ದಕ್ಷಿಣ ಕ್ಷೇತ್ರದ ಶಾಸಕರಾದ ಸಮರ್ಥ್ ಶಾಮನೂರು ಮತ್ತು ದಾವಣಗೆರೆಯ ಜಿಲ್ಲಾಧಿಕಾರಿಗಳಾದ ಗಂಗಾಧರಸ್ವಾಮಿಯವರು ಎಸ್.ಜಾನಕಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಏರ್ಪಡಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ, ಮಹಂತ್ ಮೋರ‍್ಸ್ ಮಾಲೀಕರಾದ ಪ್ರಶಾಂತ್ ಪಿ.ಹೆಚ್, ವಿಶ್ವಾಗ್ರ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಡಾ|| ಶಿವಕುಮಾರ್ ಎ. ಆಗಮಿಸಲಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಸಿನಿಮಾಸಿರಿಯ ಮೂರನೇ ಸಾರಿ ಅಧ್ಯಕ್ಷರಾಗಿ ಸುರಭಿ ಶಿವಮೂರ್ತಿ ವಹಿಸಿಕೊಳ್ಳಲಿದ್ದಾರೆ. ಉಚಿತ ಪ್ರವೇಶದ ಈ ಸಂಗೀತ ಸಮಾರಂಭದಲ್ಲಿ ಗಾಯಕ, ಗಾಯಕಿಯರಾದ ಎಂ.ಜಿ.ಜಗದೀಶ್, ಆರ್.ಟಿ.ಮೃತ್ಯುಂಜಯ, ದೇವರಾಜ್, ಅಮಿತ್‌ಶೇಖರ್, ಜಗದೀಶ್ ಬೇತೂರು, ವಿದೂಷಿ ಸಂಗೀತಾ ರಾಘವೇಂದ್ರ, ರಕ್ಷಾ ಸರಳಾಯ, ನಂದನಾ ಹಂಸಿ ಮತ್ತು ಮೈತ್ರಿ ಮುಂತಾದವರು ಉತ್ತಮ ರೀತಿಯಲ್ಲಿ ಎಸ್.ಜಾನಕಿಯವರ ಹಾಡುಗಳನ್ನು ಹಾಡುತ್ತಾರೆ.

ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗಾನಗೋಗಿಲೆ ಎಸ್.ಜಾನಕಿಯವರ ಸಂಗೀತ ನಮನ ಸಮಾರಂಭ ಯಶಸ್ವಿಗೊಳಿಸಬೆಕಾಗಿ ಸಿನಿಮಾ ಸಿರಿಯ ಪ್ರಧಾನ ಕಾರ್ಯದರ್ಶಿಯಾಗಿ ಈಶ್ವರಿ ಶಿವಕುಮಾರ್, ಖಜಾಂಚಿಯಾಗಿ ಮಲ್ಲಿಕಾರ್ಜುನ ಗಾಂಧಿ, ಪರಿಕಲ್ಪನಾ ನಿರ್ದೇಶಕರಾಗಿ ಹೆಚ್.ವಿ.ಮಂಜುನಾಥಸ್ವಾಮಿ ಸೇರಿದಂತೆ ಸಿನಿಮಾಸಿರಿಯ ಸರ್ವ ಸದಸ್ಯರು ವಿನಂತಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಾಲಿಗ್ರಾಮ ಗಣೇಶ್ ಶೆಣೈ, ಸುರಭಿ ಶಿವಮೂರ್ತಿ, ಈಶ್ವರಿ ಶಿವಕುಮಾರ್, ಮಲ್ಲಿಕಾರ್ಜುನ ಗಾಂಧಿ, ಹೆಚ್.ವಿ.ಮಂಜುನಾಥಸ್ವಾಮಿ ಉಪಸ್ಥಿತರಿದ್ದರು.